ಬೆಂಗಳೂರು : ಬೆಂಗಳೂರಿನ ಈ ರಸ್ತೆಯಲ್ಲಿ ಇಂದಿನಿಂದ 21 ದಿನ ವಾಹನ ಸಂಚಾರ ನಿರ್ಬಂಧಿಸಲಾಗಿದೆ ಎಂದು ಸಂಚಾರಿ ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ.
ಹೆಚ್.ಎ.ಎಲ್ ಏರ್‌ಪೋರ್ಟ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಪಣತ್ತೂರು ಮುಖ್ಯ ರಸ್ತೆಯಲ್ಲಿ ಬಿ.ಬಿ.ಎಂ.ಪಿ ವತಿಯಿಂದ ವೈಟ್ ಟಾಪಿಂಗ್ ಕಾಮಗಾರಿ ಕೈಗೊಳ್ಳುವ ಸಂಬಂಧ ದಿನಾಂಕ: 10.10.2025 ರಿಂದ 21 ದಿನಗಳ ಕಾಲ ಸಾರ್ವಜನಿಕರ ಮತ್ತು ವಾಹನ ಸವಾರರ ಹಿತದೃಷ್ಟಿಯಿಂದ ಈ ಕೆಳಕಂಡಂತೆ ಸಂಚಾರ ಮಾರ್ಪಾಡು ಮಾಡಲಾಗಿರುತ್ತದೆ.
ವಾಹನ ಸಂಚಾರ ನಿರ್ಬಂಧಿಸಿರುವ ರಸ್ತೆ : ಪಣತ್ತೂರು ಮುಖ್ಯ ರಸ್ತೆಯ ಪಣತ್ತೂರು ರೈಲ್ವೇ ಬ್ರಿಡ್ಜ್ ಜಂಕ್ಷನ್‌ನಿಂದ ಬೋಗನಹಳ್ಳಿ ಜಂಕ್ಷನ್ ವರಗೆ ಎರಡು ಬದಿಯ ಸಂಚಾರವನ್ನು ನಿರ್ಬಂಧಿಸಲಾಗಿರುತ್ತದೆ.
ನಿರ್ಬಂಧಿಸಲಾದ ಸಂಚಾರಕ್ಕೆ ಪರ್ಯಾಯ ಮಾರ್ಗ :
ವೈಟ್ ಫೀಲ್ಡ್ ಮತ್ತು ವರ್ತೂರು ಕಡೆಯಿಂದ ಪಣತ್ತೂರು ಮುಖ್ಯ ರಸ್ತೆಯ ಮುಖಾಂತರ ಕಾಡುಬೀಸನಹಳ್ಳಿ ಮತ್ತು ದೇವರಬೀಸನಹಳ್ಳಿ ಕಡೆಗೆ ಚಲಿಸುವ ವಾಹನಗಳು ಬಳಗೆರೆ ಟಿ ಜಂಕ್ಷನ್ ಹತ್ತಿರ ಬಲ ತಿರುವು ಪಡೆದು ವಿಬ್ ಗಯಾರ್ ರಸ್ತೆಯ ಮುಖಾಂತರ ವರ್ತೂರು ಮುಖ್ಯ ರಸ್ತೆ ಕಡೆಗೆ ಸಂಚರಿಸಿ ಮಾರತ್ತಹಳ್ಳಿ ಬ್ರಿಡ್ಜ್ ಹತ್ತಿರ ಎಡ ತಿರುವು ಪಡೆದು ಹೊರ ವರ್ತುಲ ರಸ್ತೆ ತಲುಪಿ ಕಾಡುಬೀಸನಹಳ್ಳಿ ಮತ್ತು ದೇವರಬೀಸನಹಳ್ಳಿ ಕಡೆಗೆ ಸಂಚರಿಸಬಹುದಾಗಿದೆ.
ದೇವರಬೀಸನಹಳ್ಳಿ ಮತ್ತು ಬೆಳ್ಳಂದೂರು ಕಡೆಯಿಂದ ಪಣತ್ತೂರು ಮುಖ್ಯ ರಸ್ತೆಯ ಮುಖಾಂತರ ವರ್ತೂರು ಮತ್ತು ವೈಟ್ ಫೀಲ್ಡ್ ಕಡೆಗೆ ಸಂಚರಿಸುವ ವಾಹನಗಳು ಹೊರ ವರ್ತುಲ ರಸ್ತೆಯ ಮುಖಾಂತರ ಮಾರತ್ತಹಳ್ಳಿ ಬ್ರಿಡ್ಜ್ ಕಡೆ ಸಂಚರಿಸಿ ವರ್ತೂರು ಮುಖ್ಯರಸ್ತೆ ತಲುಪಿ ವರ್ತೂರು ಮತ್ತು ವೈಟ್ ಫೀಲ್ಡ್ ಕಡೆಗೆ ಸಂಚರಿಸಬಹುದಾಗಿದೆ. ಸಾರ್ವಜನಿಕರು ಸಹಕರಿಸಲು ಕೋರಿದೆ.