ಬೆಂಗಳೂರು ಗ್ರಾಮಾಂತರ ಜಿಲ್ಲೆ: ಜಿಲ್ಲೆಯಲ್ಲಿ 2025-26 ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ರಾಗಿ ಖರೀದಿ ನೋಂದಣಿಗೆ ಡಿಸೆಂಬರ್ 15 ಕೊನೆಯ ದಿನವಾಗಿದ್ದು, ಇನ್ನೂ ನೋಂದಣಿ ಯಾಗದಿರುವ ರೈತರು ಆದಷ್ಟು ಬೇಗ ಹತ್ತಿರದ ಖರೀದಿ ಕೇಂದ್ರದಲ್ಲಿ ನೋಂದಾಯಿಸಿಕೊಳ್ಳಿ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 5 ರಾಗಿ ಖರೀದಿ ಕೇಂದ್ರಗಳಿದ್ದು,
ನೆಲಮಂಗಲ ತಾಲ್ಲೂಕು:
1) ಕೆ.ಎಫ್.ಸಿ.ಎಸ್.ಸಿ ಎಂ.ಡಿ.ಎಂ ಗೋದಾಮು ಕೆಂಪಲಿಂಗನಹಳ್ಳಿ ಕ್ರಾಸ್ ಕುಣಿಗಲ್ ರಸ್ತೆ.
2) ವಿ.ಎಸ್.ಎಸ್.ಎನ್ ಕಳಲುಘಟ್ಟ ರೈತ ಕೇಂದ್ರ, ತ್ಯಾಮಗೊಂಡ್ಲು ಹೋಬಳಿ.
3) ವಿ.ಎಸ್.ಎಸ್.ಎನ್ ರೈತ ಕೇಂದ್ರ ಸೋಂಪುರ ಹೋಬಳಿ.
ದೊಡ್ಡಬಳ್ಳಾಪುರ ತಾಲ್ಲೂಕು:
1) ರೈತ ಭವನ ಕೇಂದ್ರ, ಎ.ಪಿ.ಎಂ.ಸಿ ಯಾರ್ಡ್.
2) ರೈತ ಸಂಪರ್ಕ ಕೇಂದ್ರ, ಸಾಸಲು ಹೋಬಳಿ.
ದೇವನಹಳ್ಳಿ ತಾಲ್ಲೂಕು: ಕೆ.ಎಫ್.ಸಿ.ಎಸ್.ಸಿ ಎಂ.ಡಿ.ಎಂ ಗೋದಾಮು, ಕುರುಬರ ದೊಡ್ಡಿ ರಸ್ತೆ.
ಹೊಸಕೋಟೆ ತಾಲ್ಲೂಕು: ಕೆ.ಎಫ್.ಸಿ.ಎಸ್.ಸಿ ಎಂ.ಡಿ.ಎಂ ಗೋದಾಮು, ವೀರಭದ್ರೇಶ್ವರ ರೈಸ್ ಮಿಲ್ ಕಾಂಪೌಂಡ್ ಇಲ್ಲಿ ಅಗತ್ಯ ದಾಖಲೆಗಳೊಂದಿಗೆ ಡಿಸೆಂಬರ್ 15 ರೊಳಗೆ ನೋಂದಾಯಿಸಿಕೊಳ್ಳಿ.
ಈಗಾಗಲೇ ರಾಗಿ ಬೆಳೆದಿರುವ ರೈತರಿಂದ ನಿಯಮಾನುಸಾರ ಅಗತ್ಯ ದಾಖಲೆಗಳನ್ನು ಪಡೆದುಕೊಂಡು ನೋಂದಣಿಯನ್ನು ಪ್ರಾರಂಭಿಸಲಾಗಿರುತ್ತದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
































