ದೆಹಲಿ: ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ಲೆಜೆಂಡರಿ ಪೀಸ್ ಅವಾರ್ಡ್ಸ್ ಕೌನ್ಸಿಲ್ ಆಶ್ರಯದಲ್ಲಿ ಕಾನ್‌ಸ್ಟಿಸ್ಟ್ಯೂಷನ್ ಕ್ಲಬ್ ಆಫ್ ಇಂಡಿಯಾದಲ್ಲಿ ನಡೆದ ಸರಳ ಸಮಾರಂಭದಲ್ಲಿ ಡಾಕ್ಟರೇಟ್ ಪುರಸ್ಕೃತರಾದ ಕೆ. ಜೈಮುನಿ ಅವರಿಗೆ ಯೋಗ ಕ್ಷೇತ್ರದಲ್ಲಿನ ಅತ್ಯುತ್ತಮ ಸಾಧನೆಗಾಗಿ `ಬೆಸ್ಟ್ ಯೋಗ ಮಾಸ್ಟರ್’ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಭಾರತ ಸರ್ಕಾರದ ನವದೆಹಲಿ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಉಪಾಧ್ಯಕ್ಷರಾದ ಶ್ರೀಮತಿ ಅಂಜನಾ ಪನ್ವಾರ್ (Anjna Panwar) ಅವರು ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಕೆ. ಜೈಮುನಿ ಅವರಿಗೆ ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ವಿವಿಧ ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದು, ಡಾಕ್ಟರೇಟ್ ಪುರಸ್ಕೃತರನ್ನು ಅಭಿನಂದಿಸಿದರು.