ಚಿತ್ರದುರ್ಗ: ಜಿಲ್ಲೆಯ ರೈತರು, ಕಾರ್ಮಿಕರು, ಶ್ರಮಿಕರ ದಶಕಗಳ ಕನಸು ಭದ್ರಾ
ಮೇಲ್ದಂಡೆ ಯೋಜನೆ ಜಾರಿಗೊಂಡು ೧೬ ವರ್ಷ ಪೂರೈಸುತ್ತಿದ್ದರೂ ಕಾಮಗಾರಿ
ಪೂರ್ಣಗೊಳ್ಳದಿರುವುದು ಅತ್ಯಂತ ಬೇಸರದ ವಿಷಯ ಎಂದು ಜಿಲ್ಲಾ ನೀರಾವರಿ ಹೋರಾಟ ಸಮಿತಿ
ಅಧ್ಯಕ್ಷ ಪಿ.ಕೋದಂಡರಾಮಯ್ಯ ಹೇಳಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭದ್ರಾ
ಮೇಲ್ದಂಡೆ ಯೋಜನೆ ಜಾರಿಯಿಂದ ಲಕ್ಷಾಂತರ ಜನರ ಬದುಕು ಹಸನುಗೊಳ್ಳಲಿದೆ. ಆದರೆ, ಯೋಜನೆ
ಜಾರಿ ವಿಷಯದಲ್ಲಿ ಕೇಂದ್ರ-ರಾಜ್ಯ ಸರ್ಕಾರದ ಮಧ್ಯೆ ಇರುವ ಕಂದಕ ಬಯಲುಸೀಮೆ ಜನರನ್ನು
ಸಂಕಷ್ಟಕ್ಕೆ ಸಿಲುಕಿದೆ ಎಂದರು.
ಚುನಾವಣೆ ಸಂದರ್ಭ ನರೇಂದ್ರ ಮೋದಿ, ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ
ಅವರು ಭದ್ರಾ ಮೇಲ್ದಂಡೆ ಯೋಜನೆ ಜಾರಿ ಸಂಬAಧ ಕೊಟ್ಟ ಮಾತು ಈಡೇರಿಸಬೇಕಿದೆ.
ಬಜೆಟ್ನಲ್ಲಿ ೫,೩೦೦ ಕೋಟಿ ರೂ. ಯೋಜನೆಗೆ ಘೋಷಿಸಿದ್ದರೂ ಇಲ್ಲಿಯವರೆಗೂ ಬಿಡುಗಡೆ
ಮಾಡಿಲ್ಲ ಎಂದು ಹೇಳಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಣಕಾಸಿನ ಪರಿಸ್ಥಿತಿ ಅವಲೋಕಿಸಿದರೆ ಎಲ್ಲವೂ
ಕೇಂದ್ರದ ಹಿಡಿತದಲ್ಲಿದೆ. ಅದರಲ್ಲೂ ಈಚೆಗೆ ನರೇಗಾ ಯೋಜನೆ ಹೆಸರು ಬದಲಾವಣೆ ಜೊತೆಗೆ
ರಾಜ್ಯ ಸರ್ಕಾರದ ಮೇಲೆ ಹೆಚ್ಚು ಆರ್ಥಿಕ ಹೊರೆ ಹಾಕಲಾಗಿದೆ. ಹೀಗೆ ವಿವಿಧ ರೀತಿ
ರಾಜ್ಯಗಳ ಮೇಲೆ ಕೇಂದ್ರ ಸರ್ಕಾರದ ಸವಾರಿ ಮಾಡುತ್ತಿದೆ. ಇದರಿಂದ ರಾಜ್ಯಗಳ ಆರ್ಥಿಕ
ಪರಿಸ್ಥಿತಿ ತೀವ್ರ ಹದಗೆಟ್ಟಿದೆ ಎಂದರು.
ಇಂತಹ ವೇಳೆ ರಾಷ್ಟçದ ಬಹುದೊಡ್ಡ ಯೋಜನೆ ಆಗಿರುವ ಭದ್ರಾ ಮೇಲ್ದಂಡೆ ಯೋಜನೆ ದಿನದಿಂದ
ದಿನಕ್ಕೆ ವೆಚ್ಚ ಹೆಚ್ಚಾಗುತ್ತಿದೆ. ೫ರಿಂದ ೨೧ ಸಾವಿರ ಕೋಟಿ ರೂಪಾಯಿಗೆ
ಹೆಚ್ಚಳವಾಗಿದೆ. ಇಂತಹ ವೇಳೆ ಕೊಟ್ಟ ಮಾತಿನಂತೆ ಹಾಗೂ ಬಜೆಟ್ ಘೋಷಿಸಿದಂತೆ ಕೇಂದ್ರ
ಸರ್ಕಾರ ೫,೩೦೦ ಕೋಟಿ ರೂ. ಬಿಡುಗಡೆ ಮಾಡಿದ್ದರೆ ಕಾಮಗಾರಿ ವೇಗ
ಪಡೆದುಕೊಳ್ಳುತ್ತಿತ್ತು ಎಂದು ಹೇಳಿದರು.
ಕಾಮಗಾರಿ ಗುತ್ತಿಗೆ ಪಡೆದಿರುವವರು ತೀವ್ರ ಸಂಕಷ್ಟದಲ್ಲಿದ್ದೂ ಕೆಲಸ
ಮುಂದುವರಿಸುತ್ತಿದ್ದಾರೆ. ಅವರುಗಳಿಗೆ ಹಣ ಬಿಡುಗಡೆ ಮಾಡುವುದು ಯೋಜನೆ ತ್ವರಿತಕ್ಕೆ
ಕಾರಣವಾಗಲಿದೆ. ಆದ್ದರಿಂದ ಈ ವಿಷಯದಲ್ಲಿ ಕೇಂದ್ರ-ರಾಜ್ಯ ಸರ್ಕಾರ ತನ್ನ ಜವಾಬ್ದಾರಿ
ನಿರ್ವಹಿಸಬೇಕೆಂದು ತಿಳಿಸಿದರು.
ಕಾಮಗಾರಿ ಆರಂಭದಿಂದ ವಿವಿ ಸಾಗರದ ವರೆಗೆ ಆಗಿರುವ ಕಾಮಗಾರಿಯನ್ನು ಶುಕ್ರವಾರ
ವೀಕ್ಷಿಸಿದ್ದು, ಸಮಾಧಾನ ತಂದಿದೆ. ಇನ್ನಷ್ಟು ವೇಗ ಪಡೆದುಕೊಂಡರೇ ನಿಗದಿತ ಅವಧಿಯೊಳಗೆ
ಜಿಲ್ಲೆಯನ್ನು ಸಂಪೂರ್ಣ ಹಸಿರನ್ನಾಗಿಸಬಹುದು ಎಂದರು.
ಫೆಬ್ರವರಿ ತಿಂಗಳೊಳಗೆ ಪ್ರಾಯೋಗಿಕವಾಗಿ ಜಿಲ್ಲೆಯ ಕೆರೆಗಳಿಗೆ ನೀರು ಹರಿಸುವ ವಿಷಯವೇ
ರೋಮಾಂಚನ. ಈ ಮೂಲಕ ಜಿಲ್ಲಾ ನೀರಾವರಿ ಹೋರಾಟ ಸಮಿತಿ ನಡೆಸಿದ ಚಳವಳಿ ಸಾರ್ಥಕತೆ
ಪಡೆದುಕೊಳ್ಳಲಿದೆ ಎಂದು ತಿಳಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರ ಶೀಘ್ರದಲ್ಲಿ ಮಂಡಿಸುವ ಬಜೆಟ್ನಲ್ಲಿ ಭದ್ರಾ
ಮೇಲ್ದಂಡೆ ಯೋಜನೆಗೆ ಹೆಚ್ಚು ಅನುದಾನ ಬಿಡುಗಡೆ ಮಾಡಲು ಕ್ರಮಕೈಗೊಳ್ಳಬೇಕು. ಈ ಮೂಲಕ
ಜಿಲ್ಲೆಯ ಜನರಿಗೆ ಕೊಟ್ಟ ಮಾತನ್ನು ಎರಡು ಸರ್ಕಾರ ಉಳಿಸಿಕೊಳ್ಳಬೇಕು ಎಂದು
ಆಗ್ರಹಿಸಿದರು.
ಪ್ರೊ.ರವಿವರ್ಮಕುಮಾರ್ ಮಾತನಾಡಿ, ನ್ಯಾಯಾಲಯದ ಮೆಟ್ಟೀಲು ಏರಿ ಹೇಮಾವತಿ ನೀರನ್ನು
ಶಿರಾಕ್ಕೆ ಕೊಡಿಸಿದ್ದೇನೆ. ಅದೇ ಕಾರಣಕ್ಕೆ ಭದ್ರಾ ಮೇಲ್ದಂಡೆ ಯೋಜನೆಯನ್ನು
ಸಾರ್ವಜನಿಕ ಹಿತಾಸಕ್ತಿಯಡಿ ಅರ್ಜಿ ಸಲ್ಲಿಸಬಹುದೇ ಎಂಬ ಕುರಿತು ಅಧ್ಯಯನ
ನಡೆಸುತ್ತಿದ್ದೇನೆ. ಆದರೆ, ರಾಜ್ಯ ಸರ್ಕಾರ ತನ್ನ ಜವಾಬ್ದಾರಿ ನಿರ್ವಹಿಸುತ್ತಿದ್ದು,
ಕೇಂದ್ರ ಸರ್ಕಾರದ ಬೆಂಬಲ ಬೇಕಾಗಿದೆ ಎಂದರು.
ರಾಜ್ಯದ ೨೮ ಸಂಸದರು ಲೋಕಸಭೆಯಲ್ಲಿ ಯೋಜನೆ ಕುರಿತು ಧ್ವನಿಯೆತ್ತಿದರೆ ೫,೩೦೦ ಕೋಟಿ
ರೂ. ಬಿಡುಗಡೆ ಖಚಿತ. ಈ ನಿಟ್ಟಿನಲ್ಲಿ ಅವರ ಮೇಲೆ ಒತ್ತಡ ತರುವ ರೀತಿ ಹೋರಾಟ
ರೂಪಿಸಬೇಕು. ನನಗೆ ೭೫, ಕೋದಂಡರಾಮಯ್ಯ ಅವರಿಗೆ ೮೬. ಈ ವಯಸ್ಸಿನಲ್ಲೂ ನಾವೇ ಹೋರಾಟ
ಮಾಡಬೇಕಾ? ಯುವ ಪೀಳಿಗೆ ಪ್ರಶ್ನೀಸಿಕೊಳ್ಳಬೇಕೆಂದು ತಿಳಿಸಿದರು.
ನಾನು ಹುಟ್ಟಿದಾಗಿನಿಂದಲೂ ಭದ್ರಾ ಮೇಲ್ದಂಡೆ ಯೋಜನೆ ಹೆಸರು ಕೇಳಿ ಇದು ಸಾಧ್ಯವೇ
ಇಲ್ಲವೆಂಬ ಮನಸ್ಥಿತಿಗೆ ಬಂದಿದ್ದೇ. ಆದರೆ, ಪವಾಡ ರೀತಿ ಫೆಬ್ರವರಿ ತಿಂಗಳು ಜಿಲ್ಲೆಗೆ
ಭದ್ರಾ ನೀರು ಹರಿಯಲಿದೆ ಎಂದು ಮಾಜಿ ಅಡ್ವಕೇಟ್ ಜನರಲ್ ಪ್ರೊ.ರವಿವರ್ಮಕುಮಾರ್
ಹೇಳಿದರು. ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಳ್ಳಬಾರದು. ಈಗ ನೀರು ಹರಿಯಲಿದೆ, ಜೊತೆಗೆ
ಇನ್ನಷ್ಟು ಕೆಲಸ ಆಗಬೇಕಾಗಿದೆ. ಆದ್ದರಿಂದ ಕೋದಂಡರಾಮಯ್ಯ ತಮ್ಮ ತಂಡದೊಂದಿಗೆ ಬೀದಿಗೆ ಇಳಿಯಬೇಕು. ಜನರ ಪರವಾಗಿ ಹೋರಾಟ ಮಾಡಬೇಕು. ರಾಜಕಾರಣ ಮತ್ತು ಹೋರಾಟವೇ ಬೇರೆ ಎಂಬ
ಸತ್ಯ ಅರಿತುಕೊಳ್ಳಬೇಕೆಂದರು.
ರಾಜ್ಯದಲ್ಲಿ ರೈತಸಂಘ ಅನೇಕ ಜನಪರ ಹೋರಾಟ ಮಾಡಿದೆ. ಆದರೆ, ಭದ್ರಾ ಮೇಲ್ದಂಡೆ
ವಿಷಯದಲ್ಲಿ ಕೆಲ ರೈತರು ಪರಿಹಾರ ಪಡೆದುಕೊಂಡು ಕಾಮಗಾರಿಗೆ ಅಡ್ಡಿಪಡಿಸುವ ಕೆಲಸ ಬೇಸರದ
ಸಂಗತಿ ಎಂದು ಪ್ರೊ.ರವಿವರ್ಮಕುಮಾರ್
. ಈ ವಿಷಯಲ್ಲಿ ರೈತಮುಖಂಡರು,
ಕೃಷಿಕರಿಗೆ ಬುದ್ಧಿಮಾತು ಹೇಳಬೇಕಿದೆ. ಇಲ್ಲದಿದ್ದರೆ ರೈತಸಂಘಕ್ಕೆ ಉರುಳಾಗುವ
ಸಾಧ್ಯತೆ ಹೆಚ್ಚು ಆತಂಕ ವ್ಯಕ್ತಪಡಿಸಿದರು.
ರಾಜ್ಯ ರೈತಸಂಘದ ಸೋಮಗುದ್ದು ರಂಗಸ್ವಾಮಿ, ಈಚಘಟ್ಟದ ಸಿದ್ದವೀರಪ್ಪ, ಬೇಡರೆಡ್ಡಿಹಳ್ಳಿ
ಬಸವರೆಡ್ಡಿ, ಹೊರಕೇರಪ್ಪ, ನಗರಸಭೆ ಮಾಜಿ ಅಧ್ಯಕ್ಷ ಸಿ.ಟಿ.ಕೃಷ್ಣಮೂರ್ತಿ, ಮುಖಂಡರಾದ
ಜಿ.ಎಸ್.ಉಜ್ಜನಪ್ಪ, ಆರ್.ಶೇಷಣ್ಣಕುಮಾರ್, ಡಿ.ದುರುಗೇಶ್, ಚಳ್ಳಕೆರೆ ಬಸವರಾಜ್,
ನರೇನಹಳ್ಳಿ ಅರುಣ್ಕುಮಾರ್, ರಾಘವೇಂದ್ರ ನಾಯ್ಕ, ಕೂನಿಕೆರೆ ರಾಮಣ್ಣ,
ಸಂಪತ್ಕುಮಾರ್, ಟಿ.ಶಫಿಉಲ್ಲಾ, ತಿಪ್ಪೀರಯ್ಯ, ವದ್ದಿಕೆರೆ ಕಾಂತರಾಜ್ ಇತರರು.






























