ಭಾರತ್ ಪೆಟ್ರೋಲಿಯಂ (Bharat Petroleum) ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ್ದು. ಅಧಿಕೃತ website ಗೆ ಭೇಟಿ ನೀಡಿ ನಂತರ Online ಮೂಲಕ ಅರ್ಜಿ ಸಲ್ಲಿಸಬಹುದು.
ನೇಮಕಾತಿಯ ಹೆಸರು : ಭಾರತ್ ಪೆಟ್ರೋಲಿಯಂ.
ಹುದ್ದೆಗಳ ಹೆಸರು : ಪೆಟ್ರೋಲಿಯಂ ಜೂನಿಯರ್ ಎಕ್ಸಿಕ್ಯುಟಿವ್ ಮತ್ತು ಸೆಕ್ರೆಟರಿ.
ಅರ್ಜಿಗಳ ಸಂಖ್ಯೆಯನ್ನು ಆಧರಿಸಿ ಆಯ್ಕೆ ಪ್ರಕ್ರಿಯೆಯ ನಿರ್ಧರಿಸಲಾಗುತ್ತದೆ.
ವೇತನ ಶ್ರೇಣಿ : ಜೂನಿಯರ್ ಎಕ್ಸಿಕ್ಯೂಟಿವ್ : ರೂ.30,000/- ರಿಂದ ರೂ. 1,20,000/- ಸೆಕ್ರೇಟರಿ ಹುದ್ದೆಗೆ : ರೂ.40,000/- ರಿಂದ ರೂ.1,40,000/-
ಶೈಕ್ಷಣಿಕ ಅರ್ಹತೆ : ಜೂನಿಯರ್ ಎಕ್ಸಿಕ್ಯುಟಿವ್ :
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ರಾಸಾಯನಿಕ ವಿಜ್ಞಾನದಲ್ಲಿ B.sc ಪದವಿಯನ್ನು ಹೊಂದಿರಬೇಕು. ಅಭ್ಯರ್ಥಿಯು ಕನಿಷ್ಠ ಶೇ. 60 (ಅಥವಾ ಸಮಾನವಾದ CGPA) ಅಂಕಗಳನ್ನು ಹೊಂದಿರಬೇಕು. SC/ST/PwBD ಅಭ್ಯರ್ಥಿಗಳಿಗೆ ಇದನ್ನು ಶೇ. 55 ಕ್ಕೆ ಇಳಿಸಲಾಗಿದೆ. ಅಭ್ಯರ್ಥಿಯು ಕನಿಷ್ಠ 60 ಶೇಕಡಾವಾರು (ಅಥವಾ ಸಮಾನ CGPA) ದೊಂದಿಗೆ ಕೆಮಿಕಲ್ ಎಂಜಿನಿಯರಿಂಗ್‌ನಲ್ಲಿ Diploma (3 ವರ್ಷಗಳ ಕೋರ್ಸ್) ಹೊಂದಿರಬೇಕು. SC/ST/PwBD ಅಭ್ಯರ್ಥಿಗಳು 55 ಶೇಕಡಾವಾರು ಹೊಂದಿರಬೇಕು. ಅಭ್ಯರ್ಥಿಯು ಪೆಟ್ರೋಲಿಯಂ/ತೈಲ ಮತ್ತು ಅನಿಲ/ಪೆಟ್ರೋ-ರಾಸಾಯನಿಕ ಉದ್ಯಮದಲ್ಲಿ ಪ್ರಯೋಗಾಲಯದಲ್ಲಿ ಕನಿಷ್ಠ 5 ವರ್ಷಗಳ ಅನುಭವವನ್ನು ಹೊಂದಿರಬೇಕು.
ಕಾರ್ಯದರ್ಶಿ :
ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ (3 ವರ್ಷಗಳ ಕೋರ್ಸ್) ಹೊಂದಿರಬೇಕು. 12 ನೇ ತರಗತಿ ಮತ್ತು 10 ನೇ ತರಗತಿಯಲ್ಲಿ ಕನಿಷ್ಠ ಶೇ.70 ಅಂಕಗಳು (ಅಥವಾ ಸಮಾನ CGPA) ಹೊಂದಿರಬೇಕು. SC/ST/PwBD ಅಭ್ಯರ್ಥಿಗಳು 65 ಶೇಕಡಾವಾರು ಹೊಂದಿರಬೇಕು. ಅಭ್ಯರ್ಥಿಯು ಆಡಳಿತಾತ್ಮಕ ಕಾರ್ಯದರ್ಶಿ, ಪಿಎ/ಕಾರ್ಯನಿರ್ವಾಹಕ ಸಹಾಯಕ/ಕಾರ್ಯದರ್ಶಿ ಕೆಲಸ/ಕಚೇರಿ ನಿರ್ವಹಣೆಯಲ್ಲಿ ಕನಿಷ್ಠ 6 ತಿಂಗಳ ಡಿಪ್ಲೊಮಾ ಅಥವಾ ಪ್ರಮಾಣಪತ್ರವನ್ನು ಹೊಂದಿರಬೇಕು. ಅಭ್ಯರ್ಥಿಯು ಕನಿಷ್ಠ 5 ವರ್ಷಗಳ ಕೆಲಸದ ಅನುಭವವನ್ನು ಹೊಂದಿರಬೇಕು.
ವಯೋಮಿತಿ :
ಸಾಮಾನ್ಯ ವರ್ಗದವರು/ಆರ್ಥಿಕವಾಗಿ ಹಿಂದುಳಿದ ಕೆಟಗರಿ ಅಭ್ಯರ್ಥಿಗಳು : 29 ವರ್ಷ ವಯಸ್ಸು ಮೀರಿರಬಾರದು. ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳು : 3 ವರ್ಷ. ಮತ್ತು SC/ST ಅಭ್ಯರ್ಥಿಗಳು : 5 ವರ್ಷ ವಯಸ್ಸಿನ ಸಡಿಲಿಕೆ ಇದೆ.
ಅರ್ಜಿ ಶುಲ್ಕ :
ಅಭ್ಯರ್ಥಿಗಳು ಮರುಪಾವತಿಸಲಾಗದ ರೂ.1,180 ಶುಲ್ಕವನ್ನು ಪಾವತಿಸಬೇಕು. SC/ST ಮತ್ತು PwBD ಅಭ್ಯರ್ಥಿಗಳು : ಯಾವುದೇ ಅರ್ಜಿ ಶುಲ್ಕ ನೀಡಬೇಕಾಗಿಲ್ಲ.
ಆಯ್ಕೆ ಪ್ರಕ್ರಿಯೆ : ಬಹು-ಹಂತಗಳ ಆಯ್ಕೆ ಪ್ರಕ್ರಿಯೆ ಇದಾಗಿದೆ.
ಅರ್ಜಿ ಪರಿಶೀಲನೆ (ಶೈಕ್ಷಣಿಕ ಅರ್ಹತೆ, ಕೆಲಸದ ಅನುಭವ ಇತ್ಯಾದಿಗಳ ಆಧಾರದ ಮೇಲೆ). ಲಿಖಿತ/ಕಂಪ್ಯೂಟರ್ ಆಧಾರಿತ ಪರೀಕ್ಷೆ. ಪ್ರಕರಣ ಆಧಾರಿತ ಚರ್ಚೆ/ಗುಂಪು ಕಾರ್ಯ/ವೈಯಕ್ತಿಕ ಸಂದರ್ಶನ ಇತ್ಯಾದಿಗಳು.
ಅರ್ಜಿ ಸಲ್ಲಿಸುವ ವಿಧಾನ :
BPCL ಹುದ್ದೆಗಳಿಗೆ ನೇಮಕ ಪ್ರಕ್ರಿಯೆಯನ್ನು banking ಸಿಬ್ಬಂದಿ ನೇಮಕಾತಿ ಸಂಸ್ಥೆ – IBPS ನಡೆಸುತ್ತಿದೆ. IBPS ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬೇಕು. IBPS ನ BPCL ನೇಮಕ ಪ್ರಕ್ರಿಯೆ website https://ibpsonline.ibps.in/bpcljan25/ ಗೆ ಭೇಟಿ ನೀಡಿ. Open ಆದ web page ನಲ್ಲಿ ‘Click Here For New Registration’ ಎಂದ ಸ್ಥಳದಲ್ಲಿ ಕ್ಲಿಕ್ ಮಾಡಿ. ಮತ್ತೊಂದು web page Open ಆಗುತ್ತದೆ. ಕೇಳಲಾದ basic details ನೀಡಿ ಮೊದಲು registration ಪಡೆಯಿರಿ. ನಂತರ login ಆಗುವ ಮೂಲಕ detail application ಸಲ್ಲಿಸಿ.
ಪ್ರಮುಖ ದಿನಾಂಕ :
ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ : ಫೆಬ್ರವರಿ 22, 2025. ನಿಮ್ಮ Online ಅರ್ಜಿ print ತೆಗೆದುಕೊಳ್ಳಲು ಕೊನೆ ದಿನಾಂಕ : ಮಾರ್ಚ 09, 2025.
ಅರ್ಜಿಯ ಶುಲ್ಕ ಪಾವತಿಗೆ : ಫೆಬ್ರುವರಿ 22, 2025 ರವರೆಗೆ ಅವಕಾಶ ನೀಡಲಾಗಿದೆ.
ಪ್ರಮುಖ ಲಿಂಕ್ : ಅಭ್ಯರ್ಥಿಗಳು Bharath petroleum ನ ಅಧಿಕೃತ ವೆಬ್‌ಸೈಟ್ https://ibpsonline.ibps.in/bpcljan25/ ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.