ಬೆಂಗಳೂರು: ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ನಡೆಯ ಬೆಗ್ಗೆ ಕೆಲ ಸಚಿವರು ಮತ್ತು ಶಾಸಕರು ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಮುಂದೆಯೇ ಸುರ್ಜೆವಾಲ ನಡೆಯ ಬಗ್ಗೆ ಸಚಿವರು ಮತ್ತು ಶಾಸಕರು ಅಸಮಾಧಾನ ಹೊರ ಹಾಕಿದ್ದಾರೆ ಎಂಬ ಮಾಹಿತಿ ಸಿಗುತ್ತಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾಗಿರುವ ಸುರ್ಜೆವಾಲ ಕೇವಲ ಡಿಸಿಎಂ ಡಿಕೆಶಿ ತಾಳಕ್ಕೆ ತಕ್ಕಂತೆ ನಡೆಯುತ್ತಿದ್ದಾರೆ ಎಂಬುವುದು ಕೆಲ ಸಚಿವರು ಮತ್ತು ಶಾಸಕರ ಅಸಮಾಧಾನಕ್ಕೆ ಕಾರಣವಾವಿಗಿದೆ. ಪ್ರಮುಖವಾಗಿ ಎರಡ್ಮೂರು ವಿಚಾರಗಳಲ್ಲಿ ಸುರ್ಜೆವಾಲ ನಡೆಯ ಬಗ್ಗೆ ಸಿಎಂ ಸಿದ್ದರಾಮಯ್ಯ ಮುಂದೆ ಕೆಲ ಸಚಿವರು ಮತ್ತು ಶಾಸಕರು ಅಸಮಾಧಾನ ಹೊರ ಹಾಕಿದ್ದಾರೆ ಎನ್ನಲಾಗಿದೆ. ಹಾಸನದ ಸ್ವಾಭಿಮಾನಿ ಸಮಾವೇಶವನ್ನ ಮಾಡಲು ಹೊರಟಾಗ ಅದರ ಹೆಸರು ಬದಲಾವಣೆ ಮತ್ತು ಅದು ಪಕ್ಷದ ಕಾರ್ಯಕ್ರಮ ಮಾಡಲು ಸುರ್ಜೆವಾಲ ಅವರೇ ಕಾರಣ ಅನ್ನೋದು ಕೆಲ ಶಾಸಕರ ಆರೋಪವಾಗಿದೆ ಅಲ್ದೇ ಇತ್ತೀಚೆಗೆ ಪರಮೇಶ್ವರ್ ನೇತೃತ್ವದಲ್ಲಿ ನಡೆಯಬೇಕಿದ್ದ ಡಿನ್ನರ್ ಮೀಟಿಂಗ್ ಸಹ ರದ್ದಾಗಲು ಸುರ್ಜೆವಾಲ ಅವರೇ ಕಾರಣ ಅವರೇ ಪರಮೇಶ್ವರ್ ಅವರಿಗೆ ಫೋನ್ ಮಾಡಿ ಡಿನ್ನರ್ ಮೀಟಿಂಗ್ ಮುಂದಕ್ಕೆ ಹಾಕಲು ಸೂಚಿಸಿದ್ದಾರೆ ಅಲ್ದೇ ಮೊನ್ನೆ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲೂ ಡಿಕೆಶಿ ಪರವಾಗಿಯೇ ಮಾತನಾಡಿದ್ದಾರೆ. ಒಬ್ಬ ರಾಜ್ಯ ಉಸ್ತುವಾರಿಯಾದವರು ಎಲ್ಲರ ಸಮಸ್ಯೆಗಳನ್ನ ಸರಿಸಮಾನವಾಗಿ ನೋಡಬೇಕು ಆದ್ರೆ ಸುರ್ಜೆವಾಲ ಅವರು ಡಿಕೆಶಿ ಮಾತನ್ನ ಮಾತ್ರ ಕೇಳುತ್ತಿದ್ದಾರೆ ಎಂಬುದು ಕೆಲ ಸಚಿವರು ಮತ್ತು ಶಾಸಕರ ಆರೋಪವಾಗಿದೆ. ಇದನ್ನ ಸಿಎಂ ಸಿದ್ದರಾಮಯ್ಯ ಮುಂದೆಯೇ ಕೆಲ ಸಚಿವರು ಮತ್ತು ಶಾಸಕರು ಹೇಳಿಕೊಂಡಿದ್ದಾರೆ ಎನ್ನಲಾಗಿದೆ ಸುರ್ಜೆವಾಲ ನಡೆಯ ಬಗ್ಗೆ ಹೈಕಮಾಂಡ್ ಗಮನಕ್ಕೂ ತನ್ನಿ ಎಂದಿಲ್ಲ ಹೇಳಿದ್ದಂತೆ. ಒಟ್ಟಾರೆ ಮೊನ್ನೆಯಷ್ಟೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾರ್ನಿಂಗ್ ಗೆ ಗಪ್ ಚುಪ್ ಆಗಿದ್ದ ಕೈ ನಾಯಕರು ಈಗ ಉಸ್ತುವಾರಿ ವಿರುದ್ಧವೇ ತಿರುಗಿಬಿಳುತ್ತಿದ್ದಾರೆ ಮುಂದೆ ಇದು ಯಾವ ಹಂತಕ್ಕೆ ಹೋಗಲಿದೆ ಅನ್ನೊದನ್ನ ಕಾದುನೋಡಬೇಕಿದೆ.
