ಬಿಗ್ ಬಾಸ್ ಕನ್ನಡ ಸೀಸನ್ 10ರ ರನ್ನರ್ ಅಪ್ ಡ್ರೋನ್ ಪ್ರತಾಪ್ ಸದಾ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ದೊಡ್ಮನೆಯೊಳಗೆ ಪ್ರತಾಪ್ ತುಂಬಾನೇ ಡಿಫರೆಂಟ್ ಆಗಿ ಇಡೀ ಕರ್ನಾಟಕದ ಜನತೆಯ ಮನ ಗೆದ್ದರು. ಬಿಗ್ ಬಾಸ್ನಲ್ಲಿ ಸದಾ ಜಗಳವಾಡುತ್ತಿದ್ದ ಕಂಟೆಸ್ಟೆಂಟ್ಗಳ ಮಧ್ಯೆ ಇವರು ಸೈಲೆಂಟ್ ಆಗಿ ಕಾಣಿಸಿಕೊಂಡು ಕೊನೆವರೆಗೂ ಇದ್ದು, ರನ್ನರ್ ಅಪ್ ಕೂಡ ಆಗಿದ್ದರು.
ಇದೀಗ ಡ್ರೋನ್ ಪ್ರತಾಪ್ ಈಗ ಚೀನಾಕ್ಕೆ ಹಾರಿದ್ದಾರೆ. ಚೀನಿ ಯುವತಿಯೊಂದಿಗೆ ಕಾಣಿಸಿಕೊಂಡು ಡ್ರೋನ್ ಬಗ್ಗೆ ಪಾಠ ಮಾಡುತ್ತಿರುವ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಚೀನಾದಲ್ಲಿ ಚೀನಿ ಬೆಡಗಿಯ ಜೊತೆ ಡ್ಯುಯೆಟ್ ಹಾಡುತ್ತಾ ಅದರ ವಿಡಿಯೋ ಮಾಡಿರುವ ಡ್ರೋನ್ ಪ್ರತಾಪ್, ಅಲ್ಲಿರುವ ಕೆಲವು ದಿಗ್ಗಜರಿಗೆ ಡ್ರೋನ್ ಬಗ್ಗೆ ಪರಿಚಯಿಸುತ್ತಿದ್ದಾರೆ.
ಕಾರಿನಲ್ಲಿ ಚೀನಾದ ಕೆಲವು ಮುಖಂಡರ ಜೊತೆ ಡ್ರೈವ್ ಮಾಡುತ್ತಾ ಅವರ ಪರಿಚಯವನ್ನೂ ಮಾಡಿಸಿದ್ದಾರೆ ಡ್ರೋನ್ ಪ್ರತಾಪ್. ಯಾವ್ಯಾವುದೋ ಕಂಪೆನಿಯ ಡ್ರೋನ್ ಪಾರ್ಟ್ಗಳನ್ನು ತಂದು ತಾವು ತಯಾರು ಮಾಡಿದ್ದು ಎಂದು ಹೇಳಿ ಸಾಕಷ್ಟು ಹೆಸರು ಕೆಡಿಸಿಕೊಂಡಿದ್ದ ಡ್ರೋನ್, ಅದರಿಂದ ಪಾಠ ಕಲಿತು ಇದೀಗ ಒಳ್ಳೆಯ ರೀತಿಯಲ್ಲಿ ನಡೆಯಲಿ ಎನ್ನುವುದು ಅವರ ಅಭಿಮಾನಿಗಳ ಹಾರೈಕೆ.

































