ಅಧಿಕಾರ ಹಂಚಿಕೆ ಸೂತ್ರದ ಪ್ರಕಾರ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವುದು ಶತಸಿದ್ಧ. ನವೆಂಬರ್ 15 ಅಥವಾ 16 ರಂದು ಸಿದ್ದರಾಮಯ್ಯ ರಾಜೀನಾಮೆ ನೀಡುವುದು ಖಚಿತ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೂ ಕಾಂಗ್ರೇಸ್ ಪಕ್ಷದಲ್ಲಿ ಮಿತ್ರರಿದ್ದು, ಕಾಂಗ್ರೇಸ್ ಪಕ್ಷದ ಆಂತರಿಕ ಮಾಹಿತಿ ತಮಗೂ ಗೊತ್ತಿದೆ. ಆದ್ದರಿಂದ ಖಚಿತ ಮಾಹಿತಿಯ ಪ್ರಕಾರ ನವೆಂಬರ್ 15 ಅಥವಾ 16 ರಂದು ಸಿದ್ದರಾಮಯ್ಯ ತಮ್ಮ ಹುದ್ದೆಗೆ ರಾಜೀನಾಮೆ ನೀಡಲಿದ್ದಾರೆ ಎಂದರು.