ಚಿತ್ರದುರ್ಗ; ಮುರುಘಾಶ್ರೀಗೆ ಬಿಗ್ ರಿಲೀಫ್ ಸಿಕ್ಕಿದೆ. ಪೋಕ್ಸ ಪ್ರಕರಣದಲ್ಲಿ ಮುರುಘಾಶ್ರೀ ನಿರ್ದೋಷಿ ಎಂದು ಕೋರ್ಟ್ ಪ್ರಕಟಿಸಿದೆ.
ದೀರ್ಘಕಾಲದ ವಿಚಾರಣೆಯ ನಂತರ ಇಂದು ತೀರ್ಪು ಹೊರಬಿದ್ದಿದ್ದು, ಚಿತ್ರದುರ್ಗದ ಜಿಲ್ಲಾ 2ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ ಮುರುಘಾಶ್ರೀ ವಿರುದ್ಧದ ಕೇಸ್ ಖುಲಾಸೆಗೊಳಿಸಿದೆ. ಮುರುಘಾ ಶರಣರ ವಿರುದ್ಧ ದಾಖಲಾಗಿದ್ದ ಮೊದಲ ಪೋಕ್ಸ ಪ್ರಕರಣ (ಶಾಲಾ ಬಾಲಕಿಗೆ ಲೈಂಗಿಕ ದೌರ್ಜನ್ಯ) ಕ್ಕೆ ಸಂಬಂಧಿಸಿದ ಮೊದಲ ಪ್ರಕರಣದ ತೀರ್ಪು ಇದಾಗಿದೆ.!






























