ನವದೆಹಲಿ: ಎಲ್ಪಿಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ಪರಿಷ್ಕರಿಸಲಾಗಿದ್ದು, ಅಕ್ಟೋಬರ್ 1 ರ ಇಂದಿನಿಂದ 15.50 ರೂ.ನಷ್ಟು ದುಬಾರಿಯಾಗಿದೆ.
ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗಳ ಬೆಲೆಯನ್ನು ಪರಿಷ್ಕರಿಸಲಾಗಿದ್ದು, ಸರ್ಕಾರಿ ಸ್ವಾಮ್ಯದ ಒಎಂಸಿಗಳು ಅಥವಾ ತೈಲ ಮಾರುಕಟ್ಟೆ ಕಂಪನಿಗಳು 19 ಕೆಜಿ ವಾಣಿಜ್ಯ ಸಿಲಿಂಡರ್ನ ಬೆಲೆಯನ್ನು ಹೆಚ್ಚಿಸಿವೆ. ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ನ ಚಿಲ್ಲರೆ ಬೆಲೆ ಈಗ 1,595.50 ರೂ.ಗಳಿಗೆ ತಲುಪಿದೆ. ಹಿಂದಿನ ಬೆಲೆ 1580.00 ಆಗಿದ್ದು, 15.5 ರೂ.ನಷ್ಟು ಏರಿಕೆಯಾಗಿದೆ.
ವಾಣಿಜ್ಯ ಎಲ್ಪಿಜಿ ಅನಿಲದ ಇತ್ತೀಚಿನ ಬೆಲೆ ಏರಿಕೆಯು ರೆಸ್ಟೋರೆಂಟ್ಗಳು, ಹೋಟೆಲ್ಗಳು ಮತ್ತು ಅಡುಗೆ ಸೇವೆಗಳಂತಹ ಎಲ್ಪಿಜಿಯನ್ನು ಹೆಚ್ಚು ಅವಲಂಬಿಸಿರುವ ವ್ಯವಹಾರಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.