ಪಡಿತರ ಚೀಟಿದಾರರಿಗೆ ಇದೀಗ ಬಿಗ್ ಶಾಕ್ ಎದುರಾಗಿದೆ, ಹೌದು, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಅಡಿಯಲ್ಲಿ ಅನರ್ಹ ಫಲಾನುಭವಿಗಳನ್ನು ಹೊರಹಾಕಲು ಆದಾಯ ತೆರಿಗೆ ಇಲಾಖೆಯು ಆಹಾರ ಸಚಿವಾಲಯಕ್ಕೆ
ವಿವರಗಳನ್ನು ಒದಗಿಸಲಿದ್ದು, ಇನ್ಮುಂದೆ ಅನರ್ಹ ಪಡಿತರ ಚೀಟಿದಾರರಿಗೆ ಉಚಿತ ಪಡಿತರ ಸಿಗಲ್ಲ ಎನ್ನಲಾಗಿದೆ.
ಫಲಾನುಭವಿಗಳು ತಮ್ಮ ಆಧಾರ್ ಸಂಖ್ಯೆ ಅಥವಾ ಪಾನ್ ಅನ್ನು ಮೌಲ್ಯಮಾಪನ ವರ್ಷದ ವಿವರಗಳೊಂದಿಗೆ ಸಲ್ಲಿಸಿದರೆ, ಆದಾಯ ತೆರಿಗೆ (ವ್ಯವಸ್ಥೆಗಳು) ಮಹಾ ನಿರ್ದೇಶಕರು (ಡಿಜಿಐಟಿ) ಹೆಚ್ಚಿನ
ಆದಾಯ ಹೊಂದಿರುವವರ ಡೇಟಾವನ್ನು ಒದಗಿಸುತ್ತಾರೆ ಎನ್ನಲಾಗಿದೆ.