18 ವರ್ಷ ಹುಡುಗಿಯನ್ನು 50 ವರ್ಷ ಅಂಕಲ್ ಮದುವೆಯಾದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಹುಡುಗಿಯನ್ನು ಬಲವಂತವಾಗಿ ಮದುವೆಯಾಗಿ ಮನೆಯಲ್ಲಿ ಕೂಡಿಹಾಕಿ 15 ದಿನ ನರಕ ತೋರಿಸಿದ್ದಾನೆ. ಎಂದು ಹುಡುಗಿ ಆರೋಪಿಸಿದ್ದಾಳೆ.
ಅಂಕಲ್ ನಿಂದ ತಪ್ಪಿಸಿಕೊಂಡು ತಂದೆ-ತಾಯಿ ಬಳಿಗೆ ಓಡಿಬಂದಿರುವ ಕರೀಷ್ಮಾ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಪ್ರಕಾಶ್ ವಿರುದ್ಧ ಕೆಲ ಗಂಭೀರ ಆರೋಪಗಳನ್ನು ಮಾಡಿದ್ದಾಳೆ. ನಾನು ಕೊಲ್ಹಾಪುರದಲ್ಲಿದ್ದೆ. ಕಾಲ್ ಮಾಡಿ ನನ್ನ ಹೊಟೆಲ್ ಗೆ ಕರೆದುಕೊಂಡು ಹೋಗಿದ್ದ. ಬಳಿಕ ನನಗೆ ಕೋಲ್ ಡ್ರಿಂಕ್ಸ್ ನಲ್ಲಿ ಏನೋ ಹಾಕಿ ರೂಮ್ಗೆ ಕರೆದುಕೊಂಡು ಹೋಗಿದ್ದ. ಯಾವ ಊರು ಏನ ಅಂತ ಹೇಳಿಲ್ಲ. ಮಾತು ಕೇಳದೆ ಹೋದ್ರೆ ನನ್ನ ತಂದೆಯನ್ನು ಸಾಯಿಸುವುದಾಗಿ ಧಮ್ಕಿ ಹಾಕಿದ್ದ ಎಂದಿದ್ದಾಳೆ.
ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾಳೆ.