ಕೆಜಿಎಫ್ ಚಾಪ್ಟರ್-2 ತೆರೆಕಂಡು 3 ವರ್ಷ ಕಳೆದಿದೆ, ಇದೀಗ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ 3ನೇ ಭಾಗದ ಬಗ್ಗೆ ಬಿಗ್ ಹಿಂಟ್ ಕೊಟ್ಟಿದೆ. ಆದ್ರೆ ನಿರ್ದೇಶಕ ಪ್ರಶಾಂತ್ ನೀಲ್ ಸದ್ಯಕ್ಕೆ ಬೇರೆ ಚಿತ್ರಗಳಲ್ಲಿ ಬ್ಯುಸಿ ಇದ್ದು, ʻಕೆಜಿಎಫ್ 3ʼ ಸಿನಿಮಾ ಯಾವಾಗ ಶುರುವಾಗಬಹುದು ಎಂಬ ಲೆಕ್ಕಾಚಾರದಲ್ಲಿ ಫ್ಯಾನ್ಸ್ ಕಾಯ್ತಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್-2 ಚಿತ್ರ ಬಂದು ಈಗಾಗಲೇ 3 ವರ್ಷ ಆಗೋಗಿದೆ. ಇದೀಗ ʻಕೆಜಿಎಫ್ 1′ ಮತ್ತು ʻಕೆಜಿಎಫ್ 2ʼ ಭರ್ಜರಿ ಯಶಸ್ಸಿನ ಬಳಿಕ ಅಭಿಮಾನಿಗಳು ʻಕೆಜಿಎಫ್ 3′ ಕುರಿತು ಉತ್ಸುಕತೆಯಿಂದ ಎದುರು ನೋಡುತ್ತಿದ್ದಾರೆ. ಈ ಬೆನ್ನಲ್ಲೇ ಚಿತ್ರ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲ್ಮ್ಸ್ ತನ್ನ ಇನ್‌ಸ್ಟಾ ಖಾತೆಯಲ್ಲಿ ವಿಶೇಷ ಎಐ ವಿಡಿಯೋವೊಂದನ್ನ ಹಂಚಿಕೊಳ್ಳುವ ಮೂಲಕ ಯಶ್ ಅಭಿಮಾನಿಗಳಿಗೆ ಗುಡ್‌ನ್ಯೂಸ್ ಕೊಟ್ಟಿದೆ ನರಾಚಿʼ ದ್ವಾರದಿಂದ ವಿಡಿಯೋ ಆರಂಭವಾಗುತ್ತೆ.
ಕೆಜಿಎಫ್-2ನಲ್ಲಿ ರಾಕಿ ಭಾಯ್ ಹಡಗಿನಲ್ಲಿ ಚಿನ್ನ ತುಂಬಿಕೊಂಡು ಸಮುದ್ರದ ಮಧ್ಯೆ ನಿಲ್ಲುವವರೆಗೆ ಸಾಗುತ್ತದೆ. ಆ ದೃಶ್ಯ ಸಿಗುತ್ತೆ. ಕೆಜಿಎಫ್ ಚಾಪ್ಟರ್-1ನಲ್ಲಿ ಯಶ್ ನರಾಚಿಗೆ ಎಂಟ್ರಿಕೊಟ್ಟಾಗಿನಿಂದ ಇಡೀ ಕೆಜಿಎಫ್ ಸಾಮ್ರಾಜ್ಯಕ್ಕೆ ಸಾಮ್ರಾಟನಾದವರೆಗಿನ ಕಥೆಯನ್ನ ಈ ವಿಡಿಯೋನಲ್ಲಿ ಕಟ್ಟಿಕೊಡಲಾಗಿದೆ. ಹೊಂಬಾಳೆ ಫಿಲ್ಮ್ಸ್‌ನ ಈ ವಿಡಿಯೋ ರಿಲೀಸ್ ಆಗ್ತಿದ್ದಂತೆ ಯಶ್ ಅಭಿಮಾನಿಗಳು ಸಖತ್ ಖುಷಿಯಲ್ಲಿದ್ದಾರೆ, ಕೆಜಿಎಫ್-3 ಯಾವಾಗ ಬರುತ್ತೆ? ಯಶ್ ಅವ್ರನ್ನ ಯಾವಾಗ ರಾಖಿಭಾಯ್ ಅವತಾರದಲ್ಲಿ ನೋಡ್ತೀವಿ ಅಂತೆಲ್ಲ ಕಾಮೆಂಟ್‌ನಲ್ಲಿ ಪ್ರಶ್ನೆ ಕೇಳ್ತಿದ್ದಾರೆ.