ಈ ಬಾರಿಯೂ ಬಿಗ್ಬಾಸ್ ಕನ್ನಡ ಸೀಸನ್ ಹನ್ನೆರಡರ ನಿರೂಪಣೆಯನ್ನು ಕಿಚ್ಚ ಸುದೀಪ್ ಅವರು ನಡೆಸಿಕೊಡುವ ವಿಚಾರ ಅಧಿಕೃತವಾಗುತ್ತಿದ್ದಂತೆ ದೊಡ್ಮನೆ ಅಭಿಮಾನಿಗಳು ಈ ಬಾರಿ ಬಿಗ್ಬಾಸ್ ಯಾವಾಗ ಶುರು ಎಂಬ ಪ್ರಶ್ನೆ ಕಾಡ್ತಾ ಇದೆ. ಇದರ ಬಗ್ಗೆ ಕಿಚ್ಚ ಸುದೀಪ್ ಅವರಿಂದಲೇ ಸಣ್ಣದೊಂದು ಹಿಂಟ್ ಸಿಕ್ಕಿದೆ.
ಸುದೀಪ್ ನೀಡಿರುವ ಹಿಂಟ್ ನೋಡಿದರೆ ಸೆಪ್ಟೆಂಬರ್ 21 ಅಥವಾ ಸೆಪ್ಟೆಂಬರ್ 28ರಿಂದ ಈ ಬಾರಿಯ ಬಿಗ್ ಬಾಸ್ ಕನ್ನಡ 12 ಆರಂಭವಾಗುವ ಸಾಧ್ಯ ಇದೆ. ಬಹುತೇಕವಾಗಿ ಬಿಗ್ಬಾಸ್ ಆದಿತ್ಯವಾರವೇ ಆರಂಭಗೊಳ್ಳುತ್ತದೆ. ಅದೇ ರೀತಿ ಈ ಬಾರಿಯೂ ಕೂಡಾ ಭಾನುವಾರವೇ ಅಧಿಕೃತವಾಗಿ ಚಾಲನೆಗೊಳ್ಳಲಿದೆ.
ಇನ್ನು ಸುದೀಪ್ ಅವರು ಆಯೋಜಕರಿಗೆ ನನ್ನ ಏಕೈಕ ಬೇಡಿಕೆಯೆಂದರೆ ಸ್ಪರ್ಧಿಗಳನ್ನು ಆಯ್ಕೆ ಮಾಡುವ ಹಿಂದೆ ಅವರಿಗೆ ಸ್ಪಷ್ಟವಾದ ಕಲ್ಪನೆ ಇರಬೇಕು ಅನ್ನೋದು ಎಂದಿದ್ದಾರೆ. ಸ್ಥಳೀಯ ಆಡಳಿತ ಮಂಡಳಿಯೊಂದಿಗೆ ತಮಗೆ ಯಾವುದೇ ಸಮಸ್ಯೆಗಳಿಲ್ಲ ಎಂದು ಹೇಳಿದ್ದಾರೆ. ಅಲ್ಲದೇ ಸಂಭಾವನೆ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ಮೊದಲಿಗಿಂತ ಹೆಚ್ಚೇ ಪಡೆದಿದ್ದೇನೆ ಎಂದಷ್ಟೇ ಹೇಳಿದ್ದಾರೆ.