ಬಿಗ್ ಬಾಸ್ ಕನ್ನಡ ಸೀಸನ್ 12’ರ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಸೆಪ್ಟೆಂಬರ್ 28ರಂದು ಶೋ ಪ್ರಾರಂಭ ಆಗುತ್ತಿದೆ. ಈ ಶೋಗಾಗಿ ಫ್ಯಾನ್ಸ್ ಕಾದಿದ್ದಾರೆ.
ಇಂದು ಬಿಗ್ಬಾಸ್ 12ರ ಹೊಸ ಪ್ರೋಮೋ ಬಿಡುಗಡೆ ಆಗಿದ್ದು, ಹೊಸ ಪ್ರೋಮೋನಲ್ಲಿ ಸುದೀಪ್ ಹಳೆಯ ಕತೆಯೊಂದನ್ನು ಹೇಳಿದ್ದಾರೆ. ಎಐ ಮಾದರಿ ವೀಡಿಯೋದ ಪ್ರೋಮೋದಲ್ಲಿ ಕಿಚ್ಚ ಸುದೀಪ್ ‘ಕಾಗೆ-ನರಿ’ ಕಥೆ ಹೇಳಿದ್ದಾರೆ. ಈ ಸಲ ನೀವಿದ್ದೀರಾ.. ನೀವಿದ್ದೀರಾ ಅಂತ ಕೇಳ್ತಾ ಇದ್ದೋರು, ಈಗ ನೆಕ್ಸ್ಟ್ ಏನು.. ನೆಕ್ಸ್ಟ್ ಏನು ಅಂತ ಕೇಳ್ತಿದ್ದೀರಾ. ಒಂದು ಕಥೆ ಹೇಳ್ಲಾ? ಒಂದೂರಲ್ಲಿ ಒಂದು ಕಾಗೆಯಿತ್ತು.
ನೀವೆಲ್ಲ ಸ್ಕೂಲಲ್ಲಿ ಕೇಳಿದ್ದೀರಲ್ಲ ಅದೇ ಕಥೆ. ಆ ಕಾಗೆಗೆ ಹಸಿವಾಗಿದ್ದಾಗ, ವಡೆ ಮಾಡ್ತಾ ಇದ್ದ ಅಜ್ಜಿ ಹತ್ರ ಹೋಗಿ, ‘ಅಜ್ಜಿ.. ಅಜ್ಜಿ.. ನಂಗೊಂದು ವಡೆ ಕೊಡ್ತೀಯ ಅಂತ ಕೇಳ್ತು’. ಅಜ್ಜಿ ಪ್ರೀತಿಯಿಂದ ವಡೆ ಕೊಟ್ರು. ಕಾಗೆ ಆ ವಡೆನಾ ತಗೊಂಡು ಹಾರ್ಕೊಂಡು ಹೋಗಿ ಒಂದು ಮರದ ಮೇಲೆ ಕೂತು ಇನ್ನೇನು ತಿನ್ಬೇಕು. ಆಗ ಒಬ್ಬನ ಎಂಟ್ರಿ. ವಿಲನ್.. ಕಾಗೆ ಬಾಯಲ್ಲಿದ್ದ ವಡೆನಾ ಕಿತ್ತುಕೊಳ್ಳೋಕೆ ಸ್ಕೆಚ್ ಹಾಕಿದ್ದ ನರಿ. ‘ಕಾಕ.. ಕಾಕ.. ನೀನು ಕೋಗಿಲೆ ಥರ ಹಾಡು ಹಾಡ್ತೀಯಾ, ನನಗೋಸ್ಕರ ಒಂದು ಹಾಡು ಹಾಡು’ ಅಂತ ಕೇಳ್ತು. ನಿಮ್ಗೆಲ್ಲ ಗೊತ್ತಿರೋ ಹಾಗೆ, ಪಾಪ ಕಾಗೆ ನರಿ ಮಾತು ಕೇಳೋಕು, ಹಾಡು ಶುರು ಮಾಡೋಕು, ವಡೆ ಕಾಗೆ ಬಾಯಿಂದ ಕೆಳಗ್ ಬೀಳೋಕು, ಇನ್ನೇನ್ ವಡೆ ನರಿ ಬಾಯಿಗೆ ಸೇರ್ಬೇಕು ಅನ್ನುವಾಗ.. ನಿಮಗೆಲ್ಲಾ ಕ್ಲೈಮ್ಯಾಕ್ಸ್ ಗೊತ್ತಿದೆ ಅಂತ ಅನ್ಕೊಂಡ್ರೆ, ಓ ಭ್ರಮೆ.. ಅಂತ ಹೇಳಿ ಸುದೀಪ್ ಕಥೆಯನ್ನ ಮುಗಿಸುತ್ತಾರೆ. ಆದರೆ, ವಡೆ ನರಿ ಬಾಯಿಗೆ ಬೀಳದೇ ಮತ್ತೆ ಕಾಗೆ ಬಾಯಿಗೆ ಹೋಗುತ್ತದೆ. ಆಗ ಕಾಗೆ ಕಣ್ಣು ಹೊಡೆಯುತ್ತದೆ.
ನರಿ ನಿರಾಸೆಯಿಂದ ವಾಪಸ್ ಹೋಗುತ್ತದೆ. ಸುದೀಪ್ ಮುಂದುವರಿದು, ಈ ಸಲ ಹಾಗೇನೆ. ನಾವು 11 ಸೀಸನ್ ನೋಡಿದ್ದೀವಿ. ನಮಗೆ ಬಿಗ್ ಬಾಸ್ ಬಗ್ಗೆ ಎಲ್ಲಾ ಗೊತ್ತು ಅನ್ನೋರಿಗೆ.. ಅಂತ ಹೇಳಿ ತಮ್ಮ ಮಾತನ್ನು ಕೊನೆಗೊಳಿಸುತ್ತಾರೆ. ಆ ಮೂಲಕ ಸೀಸನ್ 12 ರಲ್ಲಿ ಸಾಕಷ್ಟು ಟ್ವಿಸ್ಟ್ ಇದೆ ಅಂತ ಸುಳಿವು ಕೊಟ್ಟಿದ್ದಾರೆ.