ಕಿಚ್ಚ ಸುದೀಪ್ ಅವರು ನಡೆಸಿಕೊಡುವ ಬಿಗ್ಬಾಸ್ ಸೀಸನ್ ಗ್ರ್ಯಾಂಡ್ ಫಿನಾಲೆಗೆ ಬಂದಿದ್ದು ಇಂದು ಕೊನೆಯ ದಿನವಾಗಿದೆ. ಈ ಫಿನಾಲೆಯಲ್ಲಿ ಯಾರು ಗೆಲ್ಲುವುದು ಎನ್ನುವುದು ಎಲ್ಲರ ಕುತೂಹಲ ಮೂಡಿಸಿದೆ. ಮನೆಯಲ್ಲಿ ಇರುವ ಹನುಮಂತು, ಮಂಜು, ಮೋಕ್ಷಿತಾ, ತ್ರಿವಿಕ್ರಮ್ ಹಾಗೂ ರಜತ್ ಅವರ ಎದೆ ಢವ ಢವ ಎನ್ನುತ್ತಿದೆ. ಇದರ ನಡುವೆ ಕಿಚ್ಚ ಸುದೀಪ್ ಅವರು ನಿಮ್ಮ ಪ್ರಕಾರ ವಿನ್ನರ್ ಯಾರೆಂದು ಗುರುತಿಸುತ್ತೀರಾ ಎಂದು ಎಲ್ಲ ಸ್ಪರ್ಧಿಗಳನ್ನು ಕೇಳಿದರು.
ಸುದೀಪ್ ಅವರ ಪ್ರಶ್ನೆಗಳಿಗೆ ಮೋಕ್ಷಿತಾ ಅವರು ಗ್ರಾಫ್ ಮೇಲೆ ಫೋಟೋಗಳನ್ನು ಇಡುವ ಮೂಲಕ ಗುರುತು ಮಾಡಿದ್ದಾರೆ. ವಿನ್ನರ್ ಹನುಮಂತು ಎಂದು ಮೋಕ್ಷಿತಾ ಹೇಳಿದ್ದಾರೆ. ಇದು ಹೇಗೆ ಸಾಧ್ಯ ಅಂತನೂ ಮೋಕ್ಷಿತಾ ಉತ್ತರ ತಿಳಿಸಿದ್ದಾರೆ. ಹನುಮಂತು ಅವರ ವ್ಯಕ್ತತ್ವದಿಂದ ಅವರು ಮೊದಲ ಸ್ಥಾನದಲ್ಲಿದ್ದಾರೆ. ಭವ್ಯ ಆಟದಲ್ಲಿ ವರ್ತನೆ ನೋಡಿ ಕೊನೆ ಸ್ಥಾನಕ್ಕೆ ಹೋಗಿದ್ದಾರೆ.
ರಜತ್ ಅವರು ಕೂಡ ಗ್ರಾಫ್ನಂತೆ ಫೋಟೋಗಳನ್ನು ಜೋಡಿಸಿದ್ದು ಅವರು ಕೂಡ ಹನುಮಂತು ಫೋಟೋ ಫೋಟೋವನ್ನು ಟಾಪ್ನಲ್ಲಿ ಇಟ್ಟಿದ್ದಾರೆ. ಮೋಕ್ಷಿತಾ ಅವರ ಫೋಟೋವನ್ನು ಕೊನೆಯಲ್ಲಿಟ್ಟಿದ್ದಾರೆ. ಇನ್ನು ತ್ರಿವಿಕ್ರಮ್ ಕೂಡ ಇದೇ ರೀತಿ ಮಾಡಿದ್ದು ಹನುಮಂತು ಫೋಟೋವನ್ನು 2ನೇ ಸ್ಥಾನದಲ್ಲಿ ಇಟ್ಟು ಮೊದಲ ಸ್ಥಾನದಲ್ಲಿ ರಜತ್ದು ಇಟ್ಟಿದ್ದಾರೆ. ತ್ರಿವಿಕ್ರಮ್ ಅವರು ತಮ್ಮನ್ನು ತಾವು 3ನೇ ಸ್ಥಾನದಲ್ಲಿ ತೋರಿಸಿಕೊಂಡು ಹನುಮಂತನ ಆಟ, ವ್ಯಕ್ತಿತ್ವ ಗುರುತಿಸಿದ್ದಾರೆ.
ಇದೇ ರೀತಿ ಮಂಜು ಅವರು ಕೂಡ ಕಿಚ್ಚ ಸುದೀಪ್ ಮುಂದೆ ಮಾತನಾಡಿ, ತಮ್ಮನ್ನು ತಾವೇ ಮೊದಲ ಸ್ಥಾನದಲ್ಲಿ ಗುರುತಿಸಿಕೊಂಡು ವಿನ್ನರ್ ಎಂದು ಹೇಳಿಕೊಂಡಿದ್ದಾರೆ. ಅದರಂತೆ ಹನುಮಂತು 2ನೇ ಸ್ಥಾನ ಕೊಟ್ಟಿದ್ದಾರೆ. ಹನುಮಂತನ ವ್ಯಕ್ತಿತ್ವ, ಸಿಂಪಲ್ ಸಿಟಿ, ವ್ಯಕ್ತಿತ್ವದಿಂದ ನನ್ನ ಪ್ರಕಾರ 2ನೇ ಸ್ಥಾನದಲ್ಲಿ ಇರುವುದು ಉತ್ತಮ ಎಂದಿದ್ದಾರೆ. ಇನ್ನು ಮೋಕ್ಷಿತಾ ಅವರು ಮನೆಯೊಳಗಿನ ಸ್ಪರ್ಧಿಗಳನ್ನ ಗಣನೆಗೆ ತೆಗೆದುಕೊಂಡರೇ ಒಂದು ಹೆಜ್ಜೆ ಹಿಂದೆ ಇದ್ದಾರೆ ಎಂದು ಮಂಜು ಹೇಳಿದ್ದಾರೆ.
ಇದೆಲ್ಲವನ್ನು ಬಿಟ್ಟು ಸೋಶಿಯಲ್ ಮೀಡಿಯಾದಲ್ಲಿ ಪ್ರಚಾರ ತೆಗೆದುಕೊಂಡರೇ ಹನುಮಂತು ಹೆಚ್ಚಿನ ವೋಟ್ ಪಡೆದಿರುವ ಸಾಧ್ಯತೆ ಇದೆ. ಅಲ್ಲದೇ ಈ ಬಾರಿ ಬಿಗ್ಬಾಸ್ಗೆ 5 ಕೋಟಿಗೂ ಅಧಿಕ ವೋಟ್ಗಳು ಬಂದಿರುವುದು ಅಚ್ಚರಿ ಮೂಡಿಸಿದೆ. ಇದಕ್ಕೆ ಮುಖ್ಯ ಕಾರಣ ಉತ್ತರ ಕರ್ನಾಟಕ ಭಾಗದವರೂ ಹೆಚ್ಚಿನ ಸಂಖ್ಯೆಯಲ್ಲಿ ವೋಟ್ ಮಾಡಿರಬಹುದು.
ಇದರ ಜೊತೆಗೆ ಹನುಮಂತು ಅವರು ಮನೆಯಲ್ಲಿ ಹಾಡಿರುವ ಟಾಸ್ಕ್ ಹಾಗೂ ಜಾನಪದ ಸಾಂಗ್ಗೆ ಮಾರು ಹೋಗಿ ದಕ್ಷಿಣ ಕರ್ನಾಟಕದಿಂದಲೂ ವೋಟ್ಗಳು ಅವರಿಗೆ ಬಂದಿರುವ ಸಾಧ್ಯತೆ ಇದೆ. ಸದ್ಯ ಈಗಲೇ ವಿನ್ನರ್ ಯಾರು ಎಂದು ಹೇಳಲು ಆಗುವುದಿಲ್ಲ. ಇನ್ನೇನು ಕೆಲವೇ ಕೆಲವು ಗಂಟೆಗಳನ್ನು ಬಿಗ್ಬಾಸ್ ವಿನ್ನರ್ ಯಾರೆಂದು ಸುದೀಪ್ ಅವರೇ ತಿಳಿಸಲಿದ್ದಾರೆ. ಅಲ್ಲಿವರೆಗೆ ಪ್ರೇಕ್ಷಕರೆಲ್ಲಾ ಕಾಯಬೇಕಿದೆ.