ಬೆಂಗಳೂರು: ಕಿಚ್ಚ ಸುದೀಪ್ ಸಾರಥ್ಯದಲ್ಲಿ ನಡೆಯಲಿರುವ ಬಿಗ್ ಬಾಸ್ ಸೀಸನ್ 10ಗೆ ಭಾನುವಾರ ಅಧಿಕೃತವಾಗಿ ಚಾಲನೆ ಸಿಕ್ಕಿದೆ. ಈ ಸೀಸನ್ನ ಗ್ರಾಂಡ್ ಇವೆಂಟ್ ಭಾನುವಾರದಿಂದ ಪ್ರತಿದಿನ ಕಲರ್ಸ್ ಕನ್ನಡದಲ್ಲಿ ಪ್ರಸಾರ ಶುರುವಾಗಿದೆ. ಈ ಬಾರಿ ಒಟ್ಟು 19 ಸ್ಪರ್ಧಿಗಳು ವೇದಿಕೆಯ ಮೇಲೆ ಬಂದಿದ್ದರು. ಅದರಲ್ಲಿ ಇಬ್ಬರು ಮತವನ್ನು ಪಡೆಯಲಾಗದೇ ತಮ್ಮ ಮನೆಗೆ ವಾಪಸ್ಸಾದರು. 11 ಸ್ಪರ್ಧಿಗಳು ವೋಟು ಪಡೆದುಕೊಂಡು ಮನೆ ಒಳಗೆ ಪ್ರವೇಶ ಮಾಡಿದರು. ಉಳಿದ ಆರು ಜನರು ಕಡಿಮೆ ಮತಗಳನ್ನು ಪಡೆದು ವೇಟಿಂಗ್ ಲಿಸ್ಟ್ ನಲ್ಲಿದ್ದಾರೆ. ಈ ಬಾರಿಯ ಬಿಗ್ಬಾಸ್ನಲ್ಲಿ ಹಲವು ವಿಶೇಷ ಸ್ಪರ್ಧಾಳುಗಳನ್ನು ಕರೆತರಲಾಗಿದೆ. ಬಿಗ್ಬಾಸ್ ಮನೆಯಲ್ಲಿ ಅಬ್ಬರಿಸಲು ಮೊದಲ ಕಂಟೆಸ್ಟಂಟ್ ಆಗಿ ಪುಟ್ಟ ಗೌರಿಯ ಮದುವೆ ಧಾರಾವಾಹಿಗಳಲ್ಲಿ ಮಿಂಚಿರುವ ನಮ್ರತಾ ಅವರು ಆಗಮಿಸಿದ್ದಾರೆ. ಎರಡನೇ ಸ್ಪರ್ಧಿಯಾಗಿ ಕಿರುತೆರೆ ನಟ ಸ್ನೇಹಿತ್ ಅವರು ಬಿಗ್ಬಾಸ್ ಮನೆಯನ್ನು ಪ್ರವೇಶಿಸಿದ್ದಾರೆ. ಮೂರನೇ ಬಿಗ್ ಬಾಸ್ ಸ್ಪರ್ಧಿಯಾಗಿ ರ‍್ಯಾಪರ್ ಈಶಾನಿ ಆಯ್ಕೆಯಾಗಿದ್ದಾರೆ. ಇನ್ನು ನಾಲ್ಕನೇ ಸ್ಪರ್ಧಿಯಾಗಿ ಹರಹರ ಮಹಾದೇವ್ ಧಾರಾವಾಹಿಯಲ್ಲಿ ಶಿವನ ಪಾತ್ರದಲ್ಲಿ ಮಿಂಚಿದ್ದ ವಿನಯ್ ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಐದನೇ ಸ್ಪರ್ಧಿಯಾಗಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂತೋಷ್, ಆರನೇ ಸ್ಪರ್ಧಿಯಾಗಿ ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ತೃತೀಯ ಲಿಂಗಿ ನೀತು ವನಜಾಕ್ಷಿ ಆಯ್ಕೆಯಾಗಿದ್ದಾರೆ. ಏಳನೇ ಸ್ಪರ್ಧಿಯಾಗಿ ರಂಗೋಲಿ ಧಾರಾವಾಹಿ ಮೂಲಕ ಮನೆಮಾತಾಗಿದ್ದ ಸಿರಿ ಬಿಗ್ಬಾಸ್ ಅಂಗಳಕ್ಕೆ ಧುಮುಕಿದ್ದಾರೆ. ಎಂಟನೇ ಸ್ಪರ್ಧಿಯಾಗಿ ಸಾಮಾಜಿಕ ಜಾಲತಾಣದಲ್ಲಿ ಚಿರಪರಿಚಿತ, ಮೈಸೂರಿನ ಸ್ನೇಕ್ ಮಾಸ್ಟರ್ ಸ್ನೇಕ್ ಶ್ಯಾಮ್ ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. 9ನೇ ಕಂಟೆಸ್ಟಂಟ್ ಆಗಿ ಧಾರವಾಹಿ ನಟಿ ಭಾಗ್ಯಶ್ರೀ ಬಿಗ್ ಮನೆಗೆ ಕಾಲಿರಿಸಿದ್ದಾರೆ. ಸೋಮವಾರದಿಂದ ಬಿಗ್ಬಾಸ್ ಕಾರ್ಯಕ್ರಮ ಆರಂಭವಾಗಿದ್ದು, ಅಸಲಿ ಆಟ ಇನ್ನು ಶುರುವಾಗಲಿದೆ.