ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 12 ಆರಂಭಕ್ಕೆ ದಿನಗಣನೆ ಶುರು ಆಗಿದೆ. ಸೆಪ್ಟೆಂಬರ್ 28ರಂದು ಬಿಗ್ ಬಾಸ್ ಆರಂಭ ಆಗಲಿದೆ.
ಹಾಗಾದರೆ ಯಾರು? ಯಾರು ಈ ಶೋನಲ್ಲಿ ಭಾಗವಹಿಸಲಿದ್ದಾರೆ?. ಈ ಬಾರಿ ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಕನ್ನಡ ಸೀಸನ್ 12 ನಿರೂಪಣೆ ಮಾಡಲಿದ್ದಾರೆ. ಈ ಬಾರಿ ಯಾರೆಲ್ಲ ದೊಡ್ಮನೆಗೆ ಎಂಟ್ರಿ ಕೊಡಲಿದ್ದಾರೆ ಎಂದು ಕಾದು ನೋಡಬೇಕಿದೆ.
ಸ್ಯಾಮ್ ಸಮೀರ್ ಅವರು ಬಿಗ್ ಬಾಸ್ ಕನ್ನಡ ಶೋಗೆ ಹೋಗೋದಿಲ್ಲ ಎಂದು ಹೇಳಿದ್ದಾರೆ. ಈ ಹಿಂದೆ ನನಗೆ ಬಿಗ್ ಬಾಸ್ ಆಫರ್ ಬಂದಿತ್ತು. ಅದು ಫೇಕ್ ಅಥವಾ ಸತ್ಯವೋ ಎಂದು ಗೊತ್ತಿಲ್ಲ. ಆದರೆ ನಾನು ಹೋಗೋದಿಲ್ಲ, ನನಗೆ ಇದರಲ್ಲಿ ಆಸಕ್ತಿ ಇಲ್ಲ, ಈ ಅವಕಾಶ ಬೇರೆಯವರಿಗೆ ಸಿಗಲಿ ಎಂದು ಹೇಳಿದ್ದಾರೆ ನಟಿ ಶ್ರುತಿ ಹರಿಹರನ್ ಕೂಡ ಬಿಗ್ ಬಾಸ್ ಶೋನಿಂದ ಯಾವುದೇ ಆಫರ್ ಬಂದಿಲ್ಲ, ಹೋಗೋದಿಲ್ಲ ಎಂದು ಕಳೆದ ವರ್ಷವೇ ಹೇಳಿದ್ದರು.
ನಾನು ಬಿಗ್ ಬಾಸ್ ಕನ್ನಡ ಮನೆಗೆ ಹೋಗ್ತಿಲ್ಲ ಎಂದು ನಟಿ ಮೇಘನಾ ರಾಜ್ ಕೂಡ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ. ಕೆಲ ಸೀಸನ್‌ಗಳಿಂದ ನಟ ಅನಿರುದ್ಧ ಅವರು ಬಿಗ್ ಬಾಸ್ ಮನೆಗೆ ಹೋಗ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಅವರು ಹೋಗಿಲ್ಲ. ಗಟ್ಟಿಮೇಳ ಹಾಗೂ ರಾಧಾ ರಮಣ ಧಾರಾವಾಹಿ ಖ್ಯಾತಿಯ ನಟಿ ಅಶ್ವಿನಿ ಅವರು ಬಿಗ್ ಬಾಸ್ ಆಫರ್ ಬಂದರೂ ಕೂಡ ಹೋಗಿಲ್ಲ.
 
				 
         
         
         
															 
                     
                     
                     
                     
                    


































 
    
    
        