ಹಿಂದಿ ಬಿಗ್‌ಬಾಸ್ ಕಾರ್ಯಕ್ರಮ ಇನ್ನೇನು ಕೆಲವೇ ದಿನಗಳಲ್ಲಿ ಜನರ ಮುಂದೆ ಬರಲಿದೆ. ಈ ಬಾರಿಯ ಬಿಗ್‌ಬಾಸ್‌ನಲ್ಲಿ ಸಣ್ಣ ಬದಲಾವಣೆಯಿದೆ.
ಬಿಗ್‌ಬಾಸ್ ಟೀಮ್ ಸಂಖ್ಯಾಶಾಸ್ತ್ರದ ಮೊರೆ ಹೋದಂತೆ ಕಾಣುತ್ತಿದೆ. ಈ ಹಿಂದೆ ಬರೀ BIG BOSS ಆಗಿದ್ದ ಹೆಸರು ಇದೀಗ BIGG BOSS ಎಂದು ಬದಲಾವಣೆ ಮಾಡಲಾಗಿದೆ.
ಇದರಿಂದ ಕಾರ್ಯಕ್ರಮಕ್ಕೆ ಇನ್ನಷ್ಟು ಸಕ್ಸಸ್ ಸಿಗಲಿದೆ ಎಂದು ತಂಡ ನಂಬಿದಂತಿದೆ. ಖಗೋಳಶಾಸ್ತ್ರ ಮತ್ತು ಸಂಖ್ಯಾಶಾಸ್ತ್ರ ತಜ್ಞ ಸಂಜಯ್ ಬಿ. ಜುಮಾನಿ ಅವರೊಂದಿಗೆ ಪರಾಸ್ ಮಾತನಾಡಿದ್ದು, ಈ ಸಂಭಾಷಣೆಯ ಸಮಯದಲ್ಲಿ, ಸಂಜಯ್ ಜುಮಾನಿ ಬಿಗ್ ಬಾಸ್‌ಗೆ ಸಂಬಂಧಿಸಿದ ಅನೇಕ ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡಿದ್ದಾರೆ.
ನಾವು ಕಾರ್ಯಕ್ರಮದ ನಿರ್ಮಾಪಕರಿಗೆ ಶೋ ಹೆಸರಿಗೆ ಹೆಚ್ಚುವರಿ ‘ಜಿ’ ಸೇರಿಸಲು ಸೂಚಿಸಿದೆವು. ಆಗ ಅದು 24 ಸಂಖ್ಯೆಯನ್ನು ನೀಡುತ್ತಿತ್ತು. 24ನೇ ಸಂಖ್ಯೆಯು ಐಷಾರಾಮಿ, ಹಣ ಮತ್ತು ಖ್ಯಾತಿಯನ್ನು ಆಕರ್ಷಿಸುವ ಶುಕ್ರ ಗ್ರಹದೊಂದಿಗೆ ಸಂಬಂಧ ಹೊಂದಿದೆ. ಒಂದು ಜಿ ಕಡಿಮೆ ಇದ್ದಿದ್ದರೆ 21 ನಂಬರ್ ಬರುತ್ತಿತ್ತು’ ಎಂದು ಸಂಜಯ್ ಹೇಳಿದ್ದಾರೆ.