ಇನ್ಮುಂದೆ ಬೈಕ್ ನಂಬರ್ ಪ್ಲೇಟ್ ಮರೆ ಮಾಚಿದ್ರೆ ಕ್ರಿಮಿನಲ್ ಕೇಸ್ ಬೀಳುತ್ತೆ.ಟ್ರಾಫಿಕ್ ಪೊಲೀಸರು, ಎಐ ಕ್ಯಾಮೆರಾ ಮತ್ತು ಸಿಗ್ನಲ್ಗಳ ಕಣ್ತಪ್ಪಿಸಲು ಬೈಕ್ ಸವಾರರು ನಾನಾ ಕಸರತ್ತು ನಡೆಸುತ್ತಾರೆ.
ಅದರಲ್ಲೂ ನಂಬರ್ ಪ್ಲೇಟ್ಗಳು ಸರಿಯಾಗಿ ಕಾಣಿಸಬಾರದು ಅಂತಾ ಕೊನೆ ನಂಬರ್ಗಳಿಗೆ ಬಣ್ಣ ಬಳೆಯುವುದು, ಟೇಪ್ ಹಾಕುವುದು, ಬಟ್ಟೆ ಸುತ್ತುವುದನ್ನು ಮಾಡುತ್ತಾರೆ. ಹೀಗೆ ನಂಬರ್ ಪ್ಲೇಟ್ಗಳನ್ನ ತಿದ್ದುವ ಸವಾರರಿಗೆ ಬಿಸಿ ಮುಟ್ಟಿಸುವ ನಿಟ್ಟಿನಲ್ಲಿ ಪೊಲೀಸರು ಕ್ರಿಮಿನಲ್ ಕೇಸ್ ದಾಖಲಿಸುತ್ತಿದ್ದಾರೆ.
ಇತ್ತೀಚಿಗೆ ನಗರದಲ್ಲಿ ಪೊಲೀಸರು ವಾಹನ ತಪಾಸಣೆಗೆ ಮುಂದಾಗಿದ್ದು, ಈ ವೇಳೆ ಹಲವು ಬೈಕ್ ಸವಾರರು ತಮ್ಮ ಬೈಕ್ ನಂಬರ್ ಪ್ಲೇಟ್ ಅನ್ನು ಮರೆಮಾಚಿ ಸಂಚಾರ ಮಾಡುತ್ತಿರುವುದು ಕಂಡು ಬಂದಿದೆ. ಇದರಿಂದ ಎಚ್ಚೆತ್ತ ಪೊಲೀಸರು ಅಂತಹ ಬೈಕ್ ಸವಾರರನ್ನ ಪತ್ತೆ ಹಚ್ಚಿ ಅವರ ಮೇಲೆ ವಂಚನೆ ಪ್ರಕರಣ ದಾಖಲು ಮಾಡುತ್ತಿದ್ದಾರೆ.