ಚಿಕ್ಕಮಗಳೂರು : ಶರಣಾದ 6 ನಕ್ಸಲರ ವಿರುದ್ಧ ಎನ್‌ಐಎ ತನಿಖೆ ನಡೆಸುವಂತೆ ಬಿಜೆಪಿ ಆಗ್ರಹ ಮಾಡಿದೆ.
ನಕ್ಸಲರಿಗೆ ಶಸ್ತ್ರಾಸ್ತ್ರ ಪೂರೈಕೆ ಯಾರು ಮಾಡ್ತಿದ್ರು? ಈ ಹಿಂದೆ 6 ಮಂದಿ ಪತ್ತೆಗಾಗಿ ಬಹುಮಾನ ಘೋಷಿಸಲಾಗಿತ್ತು. ಅವರನ್ನು ಉನ್ನತ ತನಿಖೆಗೆ ಒಳಪಡಿಸಬೇಕು ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರಿಗೆ ಬಿಜೆಪಿ ಮನವಿ ಸಲ್ಲಿಸಿದೆ.
ನಕ್ಸಲರನ್ನು ಶರಣಾಗತಿ ಕಮಿಟಿಯವರು ಈಗ ಹೇಗೆ ಭೇಟಿ ಮಾಡಿದ್ರು? ಪೊಲೀಸ್ ಇಲಾಖೆಗೆ ಈಗ ಬೆಲೆಯೇ ಇಲ್ವಾ? ಹಾಗಾದ್ರೆ, ಈ ಹಿಂದೆ ಎಲ್ಲಿದ್ದಾರೆ ಎಂಬ ಮಾಹಿತಿ ಗೊತ್ತಿರಲಿಲ್ವಾ? ಅಂದು ಏಕೆ ಪೊಲೀಸರಿಗೆ ಮಾಹಿತಿ ನೀಡಲಿಲ್ಲ ಎಂದು ಬಿಜೆಪಿ ನಾಯಕರು ಪ್ರಶ್ನೆ ಮಾಡಿದ್ದಾರೆ.
ಶರಣಾಗತಿ ಬಳಿಕ 6 ಮಂದಿ ನಕ್ಸಲರು ಬಂದೂಕುಗಳನ್ನು ಹಸ್ತಾಂತರಿಸಿಲ್ಲ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಗೃಹ ಸಚಿವರಿಗೆ ಮನವಿ ಮಾಡಿಕೊಂಡಿದ್ದಾರೆ.