ಬ್ಲಾಕ್ ಟೀ ಗೆ ಹೋಲಿಸಿದರೆ ಬ್ಲಾಕ್ ಕಾಫಿ ಉತ್ತಮ. ತ್ವರಿತ ಶಕ್ತಿಯನ್ನು ಒದಗಿಸುವಲ್ಲಿ ಬ್ಲಾಕ್ ಕಾಫಿಯು ಪ್ರಮುಖ ಪಾತ್ರವಹಿಸುತ್ತದೆ.
ಒಂದು ಕಪ್ ಬ್ಲಾಕ್ ಕಾಫಿಯಲ್ಲಿ ಸುಮಾರು 95 ಮಿಲಿಗ್ರಾಂ ಕೆಫೀನ್ ಅಂಶ ಇರುತ್ತದೆ. ಬೆಳಗಿನ ಸಮಯದಲ್ಲಿ ಇಲ್ಲವಾದರೆ ಕೆಲಸದ ಸಮಯದಲ್ಲಿನ ಏಕಾಗ್ರತೆಯನ್ನು ಸುಧಾರಿಸಲು ಬಯಸುವವರಿಗೆ ಕಾಫಿಯು ಉತ್ತಮ ಪಾನೀಯವಾಗಿದೆ.
ಬ್ಲಾಕ್ ಕಾಫಿಯು ಕ್ರೀಡಾಪಟುಗಳ ಉತ್ತಮ ಪಾನೀಯವಾಗಿದೆ. ಇದು ದೈಹಿಕ ಕಾರ್ಯಕ್ಷಮತೆಗೆ ಉತ್ತೇಜಿಸುತ್ತದೆ. ವ್ಯಾಯಾಮದ ಮೊದಲು ಬ್ಲಾಕ್ ಕಾಫಿ ಕುಡಿಯುವುದರಿಂದ ಅಡ್ರಿನಾಲಿನ್ ಮಟ್ಟವನ್ನು ಹೆಚ್ಚಿಸುತ್ತದೆ.