ಮಹಾಕುಂಭ ಮೇಳದಲ್ಲಿ ಸರ, ಮಣಿ, ರುದ್ರಾಕ್ಷಿ ಮಾಲೆ ಮಾರಾಟ ಮಾಡುತ್ತಿದ್ದ ಕೃಷ್ಣ ಸುಂದರಿ ಮೊನಾಲಿಸಾಗೆ ಬಾಲಿವುಡ್ ಆಫರ್ ಬಂದಿದೆ.
ವಿಡಿಯೋದಲ್ಲಿ ಕಾಣಿಸಿಕೊಂಡ ಈ ಮೊನಾಲಿಸಾ ಕಣ್ಣು, ಸೌಂದರ್ಯಕ್ಕೆ ಹಲವರು ಕ್ಲೀನ್ ಬೋಲ್ಡ್ ಆಗಿದ್ದರು. ಹೀಗಾಗಿ ದಿನ ಬೆಳಗಾಗುವಷ್ಟರಲ್ಲೇ ಮೊನಾಲಿಸಾ ನ್ಯಾಷನಲ್ ಕ್ರಶ್ ಆಗಿ ಹೊರಹೊಮ್ಮಿದ್ದಳು. ಸೌಂದರ್ಯದಲ್ಲಿ ಮೊನಾಲಿಸಾ ಭೋಸ್ಲೆ ಎಲ್ಲಾ ಮಾಡೆಲ್ಗಿಂತ ಮುಂದಿದ್ದಾಳೆ. ಜಗತ್ತನ್ನೇ ತನ್ನತ್ತ ಸೆಳೆಯುವ ಕಣ್ಣುಗಳು ಕೋಟ್ಯಾಂತರ ಭಾರತೀಯರ ಮನಸ್ಸು ಕದ್ದಿದ್ದಾಳೆ.
ಇದೀಗ ಇದೇ ಮೊನಾಲಿಸಾ ಬಾಲಿವುಡ್ ಸಿನಿಮಾವೊಂದರಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಇದೇ ವಿಚಾರ ಕೇಳಿ ನೆಟ್ಟಿಗರು ಫುಲ್ ಶಾಕ್ ಆಗಿದ್ದಾರೆ. ಅರೇ ಮೊನ್ನೆ ಫೇಮಸ್ ಆಗಿರೋ ಈಕೆ ಈಗ ಬಾಲಿವುಡ್ ಸಿನಿಮಾದಲ್ಲಿ ನಟಿಸುತ್ತಾಳಾ ಅಂತ ಹುಬ್ಬೇರಿಸುತ್ತಿದ್ದಾರೆ. ಹೌದು, ಮಹಾಕುಂಭದಲ್ಲಿ ನೋಡುಗರ ಕಣ್ಮನ ಸೆಳೆದ ಮೊನಾಲಿಸಾಗೆ ಬಾಲಿವುಡ್ನಿಂದ ಆಫರ್ವೊಂದು ಬಂದಿದೆಯಂತೆ. ಬಾಲಿವುಡ್ ಸ್ಟಾರ್ ಡೈರೆಕ್ಟರ್ ಸಿನಿಮಾದಲ್ಲಿ ನಟಿಸಲು ಆಫರ್ ಬಂದಿದೆ. ಕುಂಭಮೇಳದಲ್ಲಿ ರುದ್ರಾಕ್ಷಿ ಮಾರಲು ಬಂದಿದ್ದ ಮೊನಾಲಿಸಾ ಮುಂದಿನ ದಿನಗಳಲ್ಲಿ ಬಾಲಿವುಡ್ ಸಿನಿಮಾದಲ್ಲಿ ಮಿಂಚಲು ಸಜ್ಜಾಗಿದ್ದಾರಂತೆ. ಡೈರೆಕ್ಟರ್ ಸನೋಜ್ ಮಿಶ್ರಾರಿಂದ ಮೊನಾಲಿಸಾ ಆಫರ್ ಹೋಗಿದೆಯಂತೆ
ಇನ್ನೂ, ಸನೋಜ್ ಮಿಶ್ರಾರ ಬಹು ನಿರೀಕ್ಷಿತ ಚಿತ್ರ ‘ಡೈರಿ ಆಫ್ ಮಣಿಪುರ’. ಈ ಸಿನಿಮಾಗಾಗಿ ಮುಗ್ಧೆಯ ಪಾತ್ರಕ್ಕೆ ನಟಿಯನ್ನ ಹುಡುಕುತ್ತಿದ್ದಾರಂತೆ. ಇಂದೋರ್ಗೆ ತೆರಳಿ ಮೊನಾಲಿಸಾ ಜೊತೆ ಚರ್ಚಿಸಲಿದ್ದಾರಂತೆ. ಆಕೆಗೆ ಌಕ್ಟಿಂಗ್ ಕ್ಲಾಸ್ ಕೊಡಿಸಿ, ಚಿತ್ರದಲ್ಲಿ ಚಾನ್ಸ್ ನೀಡುವ ಸಾಧ್ಯತೆ ಇದೆಯಂತೆ. ಮಣಿಪುರ ರಾಜ್ಯದ ಜ್ವಲಂತ ಸಮಸ್ಯೆಯನ್ನ ಆಧರಿಸಿದ ಸಿನಿಮಾ ಇದಾಗಿದ್ದು, ಶೀಘ್ರದಲ್ಲೇ ಡೈರೆಕ್ಟರ್ ಮೊನಾಲಿಸಾಳಿಗೆ ಭೇಟಿಯಾಗಲಿದಾರಂತೆ. ಅದೇ ಚಿತ್ರದಲ್ಲಿ ಮೊನಾಲಿಸಾಗೆ ರೈತನ ಮಗಳ ಪಾತ್ರ ನೀಡುವ ಸಾಧ್ಯತೆ ಇದೆ. ಇದೇ ಅಲ್ವಾ ಲಕ್ ಅಂದ್ರೆ.