ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ನಿಮ್ಮಗಳ ಅವಗಾಹನೆಗೆ
ವಚನ:
ನಾರೀಕೇಳ ಹುಟ್ಟಿದ ಸುಜಲವ ಅಲ್ಲಿಗೆ ಎಯ್ದಿಸಿ ಎರೆದವರಿಲ್ಲ
ಅದು ಬಲಿದು ಅಲ್ಲಿಯೇ ಅರತಾಗ ಬೇರೊಂದು ಕೊಂಡುದಿಲ್ಲ.
ಅಪ್ಪುವರತು ತುಪ್ಪ ತನ್ನಲ್ಲಿಯೆ ಒದಗಿದಂತೆ
ನಿಶ್ಚೆ ೈಸಿದ ಮನ ವಸ್ತುವಿನಲ್ಲಿ ಕೂಡಿ
ಕಾಯದ ಕರಂಡದಲ್ಲಿ ಕರಣಂಗಳರತು
ಜೀವ ಕೆಟ್ಟು ಪರಮನಾದಂತೆ.
ಈ ಭೇದವನರಿದು ಕಾಲನ ಗೆದ್ದುಕಾಲಾಂತಕ ಭೀಮೇಶ್ವರಲಿಂಗವು ತಾನಾದನು.
-ಡಕ್ಕೆಯ ಬೊಮ್ಮಣ್ಣ






























