ಬೆಂಗಳೂರು: ವಿಧಾನಮಂಡಲದ ಅಧಿವೇಶನ ಮುಗಿದ ಬಳಿಕ ಬಿಪಿಎಲ್ ಕಾರ್ಡ್ ಪರಿಷ್ಕರಣೆ ಮಾಡುವುದಾಗಿ ಆಹಾರ ಸಚಿವ ಮುನಿಯಪ್ಪ ತಿಳಿಸಿದರು.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ಸಿ.ಟಿ. ರವಿ ಅವರು ಮಾತನಾಡಿ, ಬಿಪಿಎಲ್ ಕಾರ್ಡ್ಗೆ ಅರ್ಜಿ ಹಾಕಿದರೂ ಜನರಿಗೆ ಇನ್ನೂ ಕಾರ್ಡ್ ಸಿಗುತ್ತಿಲ್ಲ. ಆದಷ್ಟು ಬೇಗ ಬಿಪಿಎಲ್ ಕಾರ್ಡ್ ಕೊಡಬೇಕು. ಬಿಪಿಎಲ್ ಕಾರ್ಡ್ ಸಿಗದಿರುವುದರಿಂದ ವೃದ್ಧರು ಕಷ್ಟ ಪಡುತ್ತಿದ್ದಾರೆ. ತುರ್ತು ವೈದ್ಯಕೀಯ ಚಿಕಿತ್ಸೆಗೂ ಕಾರ್ಡ್ ಇಲ್ಲದೇ ತೊಂದರೆ ಆಗುತ್ತಿದೆ. ರೇಷನ್ ಕಾರ್ಡ್ ಅರ್ಜಿ ಹಾಕುವಾಗಲೂ ಸರ್ವರ್ ಸಮಸ್ಯೆ ಇದೆ. ಇದನ್ನು ಸರಿ ಮಾಡಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಸಚಿವ ಮುನಿಯಪ್ಪ ಉತ್ತರ ನೀಡಿ, ಮಾರ್ಚ್ 2023ರ ವೇಳೆಗೆ 2,95,986 ಹೊಸದಾಗಿ ಬಿಪಿಎಲ್ ಕಾರ್ಡ್ಗೆ ಅರ್ಜಿ ಕೊಟ್ಟಿದ್ದಾರೆ. ಈವರೆಗೂ 2,04,760 ಕಾರ್ಡ್ ಕೊಡಲಾಗಿದೆ. ಉಳಿದ ಕಾರ್ಡ್ ಕೊಡಲು ಪರಿಶೀಲನೆ ಮಾಡುತ್ತಿದ್ದೇವೆ. ಆದಷ್ಟು ಬೇಗ ಕೊಡುತ್ತೇವೆ ಎಂದರು.