ಬ್ರಹ್ಮಗಂಟು ಸೀರಿಯಲ್ ಖ್ಯಾತಿಯ ನಟಿ ಶೋಭಿತಾ ಶಿವಣ್ಣ ಅವರ ಕೇಸ್‌ಗೆ 1 ದಿನದ ಬಳಿಕ ಮೇಜರ್ ಟ್ವಿಸ್ಟ್ ಸಿಕ್ಕಿದೆ. ಅನುಮಾನಾಸ್ಪದ ಸಾವಿನ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಹತ್ವದ ಸುಳಿವು ಪತ್ತೆ ಮಾಡಿದ್ದಾರೆ.
ಸುಧೀರ್ ಹಾಗೂ ಶೋಭಿತಾ ದಂಪತಿ ಹೈದರಾಬಾದ್‌ನ ಕೊಂಡಾಪುರ ಶ್ರೀರಾಮ ಕಾಲೋನಿಯಲ್ಲಿ ವಾಸವಾಗಿದ್ದರು. ಖಾಸಗಿ ಕಂಪನಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದ ಶೋಭಿತಾ ಪತಿ ಸುಧೀರ್ ಅವರು ಕೆಲಸದ ನಿಮಿತ್ತ ಲ್ಯಾಪ್ ಟಾಪ್‌ನಲ್ಲಿ ಕೆಲಸ ಮಾಡುತ್ತಾ ಹಾಲ್‌ನಲ್ಲಿ ನಿದ್ರೆಗೆ ಜಾರಿದ್ದರು. ಶೋಭಿತಾ ಅವರು ಬೆಡ್ ರೂಂನಲ್ಲಿ ಇದ್ದರು. ನವೆಂಬರ್ 29ರ ತಡರಾತ್ರಿ ಪತಿ ಸುಧೀರ್ ಮನೆಯಲ್ಲಿದ್ದಾಗಲೇ ಶೋಭಿತಾ ಅವರು ಸಾವಿಗೆ ಶರಣಾಗಿದ್ದಾರೆ ಎನ್ನಲಾಗಿದೆ.
ಶೋಭಿತಾ ಶಿವಣ್ಣ ಮಲಗಿದ್ದ ಬೆಡ್‌ರೂಂ ಪರಿಶೀಲನೆ ನಡೆಸಿದ ಪೊಲೀಸರಿಗೆ ಡೆತ್ ನೋಟ್ ಕೂಡ ಸಿಕ್ಕಿದೆ. ಎಲ್ಲವೂ ಪರಿಪೂರ್ಣವಾಗಿದೆ. ಆತ್ಮಹತ್ಯೆಯನ್ನು ನೀವು ಮಾಡಿಕೊಳ್ಳಬಹುದು ಎಂದು ಬರೆದಿರೋ ಶೋಭಿತಾ ಅವರು ದುಡುಕಿನ ನಿರ್ಧಾರ ತೆಗೆದುಕೊಂಡಿರುವ ಸಾಧ್ಯತೆ ಇದೆ. ಡೆತ್ ನೋಟ್ ವಶಕ್ಕೆ ಪಡೆದಿರೋ ಪೊಲೀಸರು ಇದನ್ನು ಬರೆದಿದ್ದು ಶೋಭಿತಾ ಅವರೇನಾ ಅಲ್ವಾ ಅನ್ನೋ ಆಯಾಮದಲ್ಲೂ ತನಿಖೆ ನಡೆಸುತ್ತಿದ್ದಾರೆ.
ತನಿಖೆ ನಡೆಸುತ್ತಿರುವ ಗಚ್ಚಿಬೋಲಿ ಪೊಲೀಸರು ಶೋಭಿತಾ ಪತಿ ಸುಧೀರ್ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಸುಧೀರ್ ಮೊಬೈಲ್ ವಶಕ್ಕೆ ವಶಕ್ಕೆ ಪಡೆದಿದ್ದು, ಸುಧೀರ್ ಹಾಗೂ ಶೋಭಿತಾ ನಡುವಿನ ಚಾಟಿಂಗ್ಸ್ ಪರಿಶೀಲನೆ ನಡೆಸಿದ್ದಾರೆ.
ಇತ್ತೀಚೆಗೆ ಶೋಭಿತಾ ಮತ್ತು ಸುಧೀರ್ ಗೋವಾ ಟ್ರಿಪ್‌ಗೆ ಹೋಗಿದ್ದರು. ಗೋವಾ ಹೋಗಿ ಬಂದ ನಂತರ ಶೋಭಿತಾ ಅವರು ಮಂಕಾಗಿದ್ದರು. ಮದುವೆಯಾದಾಗಿನಿಂದ ಸೀರಿಯಲ್‌ಗಳಿಂದ ಶೋಭಿತಾ ಅವರು ದೂರು ಉಳಿದಿದ್ದರು. ಹೀಗಾಗಿ ಅವರು ಶೋಭಿತಾ ಅವರು ಡಿಪ್ರೆಶನ್‌ಗೆ ಒಳಗಾಗಿದ್ರಾ ಅನ್ನೋ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಶೋಭಿತಾ ಅವರ ಪತಿ ಸುಧೀರ್ ಅವರಿಗೆ ಗಚ್ಚಿಬೋಲಿ ಪೊಲೀಸರು ತಮ್ಮ ಅನುಮತಿ ಇಲ್ಲದೇ ಹೈದರಾಬಾದ್ ಬಿಟ್ಟು ತೆರಳದಂತೆ ಖಡಕ್ ಸೂಚನೆ ನೀಡಿದ್ದಾರೆ.