ನವದೆಹಲಿ : ಜಮ್ಮು ಕಾಶ್ಮೀರದ ಸಾಂಬಾದಲ್ಲಿ ಭಾರತದ ಗಡಿ ಪ್ರವೇಶಕ್ಕೆ ಭಯೋತ್ಪಾದಕರು ಯತ್ನಿಸಿದ್ದಾರೆ. ಈ ವೇಳೆ ಗಡಿ ಭದ್ರತಾ ಪಡೆಗಳು ಭಾರತ ಪ್ರವೇಶಿಸಲು ಯತ್ನಿಸಿದ 7 ಉಗ್ರರನ್ನು ಹತ್ಯೆಗೈದಿದ್ದಾರೆ.
ಜಮ್ಮು ಗಡಿನಾಡಿನ ಬಿಎಸ್‌ಎಫ್‌ನ ಸಾಂಬಾ ಸೆಕ್ಟರ್‌ನಲ್ಲಿ ಮಧ್ಯರಾತ್ರಿ, ಭಯೋತ್ಪಾದಕರ ದೊಡ್ಡ ಗುಂಪಿನಿಂದ ಒಳನುಸುಳುವಿಕೆ ಪ್ರಯತ್ನವನ್ನು ನಡೆಸಲಾಗಿದ್ದು, ಇದನ್ನು ಕಣ್ಗಾವಲು ಗ್ರಿಡ್ ಪತ್ತೆ ಮಾಡಿದೆ. ಉಗ್ರರು ಭಾರತಕ್ಕೆ ಅಕ್ರಮವಾಗಿ ಒಳ ನುಸುಳಲು ಯತ್ನಿಸುತ್ತಿರುವುದು ಬಿಎಸ್‌ಎಫ್ ಯೋಧರಿಗೆ ತಿಳಿದುಬಂದಿದೆ. ತಕ್ಷಣ BSF ಯೋಧರು ಒಳನುಸುಳುವಿಕೆ ಪ್ರಯತ್ನವನ್ನು ತಡೆದಿದ್ದಾರೆ. ಈ ವೇಳೆ BSF ಯೋಧರು ಕನಿಷ್ಠ 7 ಭಯೋತ್ಪಾದಕರನ್ನು ಕೊಂದು ಹತ್ಯೆಗೈದಿದ್ದಾರೆ.