ನವದೆಹಲಿ: ಭಾರತದೊಳಕ್ಕೆ ಅಂತರಾಷ್ಟ್ರೀಯ ಗಡಿಯ ಮೂಲಕ ಪಾಕಿಸ್ತಾನದಿಂದ ಬರುತ್ತಿದ್ದ ಆರು ಡ್ರೋನ್‌ಗಳನ್ನು BSF ಯೋಧರು ಹೊಡೆದುರುಳಿಸಿದ್ದಾರೆ.
ಅಮೃತಸರ್‌ನ ಮೋಧೆ ಗ್ರಾಮದಲ್ಲಿ 5 ಡ್ರೋನ್‌ಗಳು ಮತ್ತು ಅಟ್ಟಾರಿ ಗ್ರಾಮದ ಬಳಿ ಮತ್ತೊಂದು ಡ್ರೋನ್ ಅನ್ನು ಹೊಡೆದುರುಳಿಸಲಾಗಿದೆ.
ಹೊಡೆದುರುಳಿಸಲಾದ ಡ್ರೋನ್‌ಗಳಿಂದ ಮೂರು ಪಿಸ್ತೂಲ್‌ಗಳು, ಮೂರು ಮ್ಯಾಗಜೀನ್‌ಗಳು, ಕೆಜಿಗೂ ಹೆಚ್ಚು ತೂಕದ ನಾಲ್ಕು ಪ್ಯಾಕೆಟ್ ಹೆರಾಯಿನ್‌ಗಳನ್ನು ವಶಕ್ಕೆ ಪಡೆಯಲಾಗಿದೆ.
ಗುರುವಾರ ಮುಂಜಾನೆ ಹೊಡೆದುರುಳಿಸಲಾದ ಒಂದು ಡ್ರೋನ್‌ನಿಂದ ಎರಡು ಮ್ಯಾಗಜೀನ್ ಗಳನ್ನು ವಶಕ್ಕೆ ಪಡೆಯಲಾಗಿದೆ.