ನವದೆಹಲಿ : ಖಾಸಗಿ ಟೆಲಿಕಾಂ ಸಂಸ್ಥೆಗಳಿಗೆ ಸೆಡ್ಡು ಹೊಡೆಯುತ್ತಿರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಸೇವೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿದೆ. ದೇಶ ಬೇರೆ ಯಾವ ಟೆಲಿಕಾಂ ಸಂಸ್ಥೆಗಳಿಗೂ ಇರದಷ್ಟು ಬೇಡಿಕೆ ಈ ಬಿಎಸ್‌ಎನ್‌ಎಲ್‌ಗೆ ಬಂದಿದೆ. ಈ ಕಾರಣದಿಂದಲೇ BSNL ಬಳಕೆದಾರರ ಸಂಖ್ಯೆ ಅತೀ ಕಡಿಮೆ ಸಮಯದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಏರಿಕೆ ಆಗಿದೆ.
ಜಿಯೋ, ಏರ್‌ಟೆಲ್, ವಿಐ ಸೇರಿದಂತೆ ಇನ್ನಿತರ ಟೆಲಿಕಾಂ ಸಂಸ್ಥೆಗಳಿಗಿಂತಲೂ ಅತೀ ಕಡಿಮೆ ಸಮಯದಲ್ಲಿ ಬರೋಬ್ಬರಿ 3 ಮಿಲಿಯನ್ ಚೆಂದಾದಾರನ್ನು ಗಳಿಸಿಕೊಂಡು ಮುನ್ನುಗ್ಗುತ್ತಿದೆ. ಹೊಸ ಲೋಗೋ ಬದಲಾಗುತ್ತಿದ್ದಂತೆ ಬಿಎಎಸ್‌ಎನ್‌ಎಲ್ ಲಕ್ ಸಹ ಬದಲಾಗಿದೆ ಎಂದು ಗ್ರಾಹಕರು ಮಾತನಾಡಿಕೊಳ್ಳುತ್ತಿದ್ದಾರೆ.
ಟೆಲಿಕಾಂ ನಿಯಂತ್ರಕ TRAI ನೀಡಿರುವ ಇತ್ತೀಚಿನ ಮಾಹಿತಿ ಪ್ರಕಾರ, ಹೊಸದಾಗಿ ಹಾಗೂ ವಿವಿಧ ಬೇರೆ ಬೇರೆ ಟೆಲಿಕಾಂಗ್ ಕಂಪನಿಗಳಿಂದ BSNL ಚೆಂದಾದಾರರ (ಪೋರ್ಟ್) ಸಂಖ್ಯೆ ಹೆಚ್ಚಾಗುತ್ತಿದೆ. ಕಡಿಮೆ ಬೆಲೆಯ ರೀಚಾರ್ಜ್, ವಿಶಿಷ್ಟ ಯೋಜನೆಗಳು, ಗ್ರಾಹಕ ಸೇಹಿ ಪ್ಲಾನ್‌ಗಳಿಂದ ಕಳೆದ ಎರಡೇ ತಿಂಗಳಲ್ಲಿ ಬಿಎಸ್‌ಎನ್‌ಎಲ್ ಗರಿಷ್ಠ ಹಂತದಲ್ಲಿ ಬೆಳವಣಿಗೆ ಹೊಂದುತ್ತಿದೆ.