ನವದೆಹಲಿ: 2024–25ನೇ ಆರ್ಥಿಕ ವರ್ಷದ 3ನೇ ತ್ರೈಮಾಸಿಕದಲ್ಲಿ ಬಿಎಸ್ಎನ್ಎಲ್ 262 ಕೋಟಿ ರೂಪಾಯಿ ಲಾಭ ಗಳಿಸಿದೆ ಎಂದು ಕೇಂದ್ರ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮಾಹಿತಿ ನೀಡಿದ್ದಾರೆ.
2007ರ ಬಳಿಕ ನಷ್ಟದ ಹಾದಿಯಲ್ಲಿದ್ದ ಬಿಎಸ್ಎನ್ಎಲ್ 17 ವರ್ಷಗಳ ಬಳಿಕ ಲಾಭದ ಹಳಿಗೆ ಮರಳಿದೆ. ಇದರಿಂದ ತನ್ನ ಸೇವೆಯ ವಿಸ್ತರಣೆ ಮತ್ತು ಚಂದಾದಾರರ ಸಂಖ್ಯೆ ಹೆಚ್ಚಳಕ್ಕೆ ನೆರವಾಗಲಿವೆ. ಸರ್ಕಾರ ಕೈಗೊಂಡಿರುವ ಕ್ರಮಗಳು ಫಲ ನೀಡಿವೆ ಎಂದು ಹೇಳಿದ್ದಾರೆ. “ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಆದಾಯದ ಬೆಳವಣಿಗೆ 20% ಮೀರುವ ನಿರೀಕ್ಷೆಯಿದೆ” ಎಂದು ಬಿಎಸ್ಎನ್ಎಲ್ ಹೇಳಿದೆ.
ಕಂಪನಿಯು ತನ್ನ ಹಣಕಾಸು ವೆಚ್ಚ ಮತ್ತು ಒಟ್ಟಾರೆ ವೆಚ್ಚವನ್ನು ಯಶಸ್ವಿಯಾಗಿ ಕಡಿಮೆ ಮಾಡಿದೆ. ಇದರಿಂದಾಗಿ ಕಳೆದ ವರ್ಷಕ್ಕೆ ಹೋಲಿಸಿದರೆ ನಷ್ಟದಲ್ಲಿ 1,800 ಕೋಟಿ ರೂಪಾಯಿಗೂ ಹೆಚ್ಚು ಇಳಿಕೆ ಕಂಡುಬಂದಿದೆ.