ಚಿತ್ರದುರ್ಗ: ಇಂಡೋ ಟಿಬೆಟ್ ಫ್ರೆಂಡ್ ಶಿಪ್ ಸೊಸೈಟಿವತಿಯಿಂದ ಚಿತ್ರದುರ್ಗ ನಗರದಲ್ಲಿ ಮಾದಾರ ಗುರು ಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀಗಳ ನೇತೃತ್ವದಲ್ಲಿಂದು ಬೃಹನ್ಮಠದ ಅನುಭವ ಮಂಟಪದಲ್ಲಿ ಬಸವ ನಾಡಿನಲ್ಲಿ ಬುದ್ದ ಸ್ಮರಣೆ ಕಾರ್ಯಕ್ರಮದ ಅಂಗವಾಗಿ ನಗರದಲ್ಲಿ ಟಿಬೆಟ್ ನ್ನರ ಪಾದಾಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು.
ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ ಸುಮಾರು 500ಕ್ಕೂ ಹೆಚ್ಚು ಟಿಬೆಟ್ ನ್ನರು ತಮ್ಮ ಸಂಪ್ರದಾ ಯಕವಾದ ಉಡುಪಾದ ಎಣ್ಣೆ ಕೆಂಪು ಬಣ್ಣದ ಸಮವಸ್ತ್ರ ಅದರ ಮೇಲೆ ಹಳದಿ ಬಣ್ಣದ ವಸ್ತ್ರವನ್ನು ಹಾಕಿ ಕೊಂಡು ನಗರದ ನೀಲಕಂಠೇಶ್ವರ ದೇವಾಲಯದಿಂದ ಮದಕರಿನಾಯಕ ವೃತ್ತದವರೆಗೂ ಪಾದಯಾತ್ರೆ ಯನ್ನು ಮಾಡುವುದರ ಮೂಲಕ ಬಸವ ನಾಡಿನಲ್ಲಿ ಬುದ್ದನ ಸ್ಮರಣೆಗೆ ಪಾತ್ರರಾದರು.ದಾರಿಯುದ್ದಕ್ಕೂ ತಮ್ಮ ಧರ್ಮದ ಮಂತ್ರಗಳನ್ನು ಪಠಣ ಮಾಡುವುದರ ಮೂಲಕ ಸರ್ವರಿಗೂ ಒಳಿತಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿದರು.
ಪಾದಯಾತ್ರೆಯ ಸಂದರ್ಭದಲ್ಲಿ ಸಂವಿಧಾನ ಶಿಲ್ಪ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ನಾಯಕ ಸಮುದಾಯ ಕುಲ ತಿಲಕ ಚಿತ್ರದುರ್ಗವನ್ನಾಳಿದ ರಾಜ ಮದಕರಿ ನಾಯಕ ಪ್ರತಿಮೆಗೆ ಮಾಲಾರ್ಪಣೆಯನ್ನು ಮಾಡಲಾಯಿತು. ಬುದ್ದ ಸ್ಮರಣೆ ಕಾರ್ಯಕ್ರಮದ ಅಂಗವಾಗಿ ಡಾ,ಬಿ.ಅರ್ ಅಂಬೇಡ್ಕರ್ ಹಾಗೂ ಮದಕರಿ ನಾಯಕ ಪ್ರತಿಮೆಗೆ ವಿಶೇಷವಾದ ಅಲಂಕಾರವನ್ನು ಮಾಡಲಾಗಿತ್ತು. ಮದಕರಿ ನಾಯಕ ವೃತ್ತದಲ್ಲಿ ಚಿತ್ರದುರ್ಗಕ್ಕೆ ಆಗಮಿಸಿದ್ದ ಟಿಬೇಟಿಯನ್ನರು ಸಚಿವ ಸಂತೋಷಲಾಡ್, ಶಾಸಕರಾದ ಕೆ.ಸಿ.ವಿರೇಂದ್ರ, ಶಿವಲಿಂಗಾನಂದ ಶ್ರೀಗಳು ಹಾಗೂ ಮಾದಾರ ಚನ್ನಯ್ಯ ಶ್ರೀಗಳಿಗೆ ಕೈ ಮುಗಿಯುವದರ ಮೂಲಕ ಪರಿಚಯ ಮಾಡಿಕೊಂಡರು. ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ನೀಲಿ ಬಣ್ಣದ ವಸ್ತ್ರದಿಂದ ಅಲಂಕಾರವನ್ನು ಮಾಡಿದ್ದರೆ ಮದಕರಿನಾಯಕ ಪ್ರತಿಮೆಯ ಸುತ್ತಾ ವಿವಿಧ ರೀತಿಯ ಹೂಗಳಿಂದ ಮದಕರಿ ನಾಯಕ ಪ್ರತಿಮೆಗೆ ಚಂಡುಹೂ ಹಾಗೂ ಗುಲಾಬಿ ಹೊಗಳಿಂದ ಮಾಡಿದ ಹಾರವನ್ನು ಹಾಕಲಾಗಿತ್ತು.
ಈ ಸಂದರ್ಭದಲ್ಲಿ ಕಾರ್ಮಿಕ ಸಚಿವರಾದ ಸಂತೋಷಲಾಡ್ರವರು ಸಹಾ ತಮ್ಮ ವಾಹನವನ್ನು ಬಿಟ್ಟು ಪಾದಯಾತ್ರೆಯ ಮೂಲಕ ಟಿಬೇಟಿಯನ್ನರ ಜೊತೆಯಲ್ಲಿ ನೀಲಕಂಠೇಶ್ವರ ದೇವಾಲಯದಿಂಧ ಮದಕರಿ ನಾಯಕ ವೃತ್ತದವರೆಗೂ ಭಾಗವಹಿಸಿದ್ದು ವಿಶೇಷವಾಗಿತ್ತು, ಇವರ ಜೊತೆಯಲ್ಲಿ ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಶ್ರೀಗಳು, ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀಗಳು, ಶಾಸಕರಾದ ಕೆ.ಸಿ.ವಿರೇಂದ್ರ ರಘುಮೂರ್ತಿ, ಮಾಜಿ ಶಾಸಕರಾದ ಎಸ್.ಕೆ.ಬಸವರಾಜನ್, ನಗರಾಭೀವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ತಾಜ್ ಪೀರ್, ಡಿಸಿಸಿ ಕಾರ್ಯಾಧ್ಯಕ್ಷರಾದ ಹಾಲಸ್ವಾಮಿ, ಜೆ.ಜೆ.ಹಟ್ಟಿ ತಿಪ್ಪೇಸ್ವಾಮಿ, ಮಾರಸಂದ್ರ ಮುನಿಯಪ್ಪ, ಮುಂಡರಗಿ ನಾಗರಾಜ್, ನಾಯಕ ಸಮುದಾಯದ ಅಧ್ಯಕ್ಷರಾದ ಹೆಚ್.ಜೆ.ಕೃಷ್ಣಮೂರ್ತಿ ಲಿಡ್ಕರ್ ಮಾಜಿ ಅಧಕ್ಷ ಓ ಶಂಕರ್, ಜಿ.ಪಂ. ಮಾಜಿ ಸದಸ್ಯ ನರಸಿಂಹಮೂರ್ತಿ, ಜಯ್ಯಪ್ಪ, ನಾಗರಾಜ್ ಸೇರಿದಂತೆ ಇತರರು ಭಾಗವಹಿಸಿದ್ದರು.