ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2025ನೇ ಸಾಲಿನ ಆಯವ್ಯಯ ಮಂಡಿಸಿದರು. ಸೀತಾರಾಮನ್ ಅವರು ಮಂಡಿಸಿದ ಹೆಲ್ತ್ ಬಜೆಟ್ನಲ್ಲಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ‘ಡೇ ಕೇರ್’ ಆರಂಭಿಸೋದಾಗಿ ತಿಳಿಸಿದ್ದಾರೆ.
ಕ್ಯಾನ್ಸರ್ ಅಪಾಯಕಾರಿ ರಣಾಂತಿಕ ಕಾಯಿಲೆ. ರೋಗಿಗೆ ಮತ್ತು ಅವನ ಕುಟುಂಬಕ್ಕೆ ಆರ್ಥಿಕ, ಮಾನಸಿಕ ಮತ್ತು ದೈಹಿಕವಾಗಿ ಹಾನಿಯನ್ನುಂಟು ಮಾಡುತ್ತದೆ. ಹೀಗಾಗಿ ಸರ್ಕಾರದಿಂದ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಡೇ-ಕೇರ್ ಸ್ಥಾಪಿಸಲಾಗುತ್ತದೆ.
ಆ ಮೂಲಕ, ಚಿಕಿತ್ಸೆಯ ಜೊತೆಗೆ, ರೋಗಿಗೆ ಮತ್ತು ಅವನ ಕುಟುಂಬಕ್ಕೆ ಮಾನಸಿಕ ಬೆಂಬಲ ನೀಡಲಾಗುತ್ತದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಪ್ರತಿದಿನ ರೋಗಿಗಳು ಡೇ ಕೇರ್ಗೆ ಬಂದು ಚಿಕಿತ್ಸೆ ಪಡೆದ ಸಂಜೆ ವೇಳೆಗೆ ಮನೆಗೆ ಹೋಗುವ ಅವಕಾಶ ಕಲ್ಪಿಸಲಾಗುತ್ತದೆ. ಇದರಿಂದ ವೇಗವಾಗಿ ಚೇತರಿಸಿಕೊಳ್ಳಲು ಮತ್ತು ಸಮಯ ಹಾಗೂ ಹಣ ಉಳಿಸಲು ಸಹಾಯ ಆಗಲಿದೆ.
ಯಾಕೆಂದರೆ ಖಾಸಗಿ ಆಸ್ಪತ್ರೆಗಳಲ್ಲಿ ಮಿತಿ ಮೀರಿ ಬಿಲ್ ಪಾವತಿಸಬೇಕಾಗಿತ್ತು. ಡೇ ಕೇರ್ ಸೆಂಟರ್ಗಳು ಕಿಮೊಥೆರಪಿ ಇನ್ಫ್ಯೂಷನ್ ಸೌಲಭ್ಯಗಳನ್ನು ಒದಗಿಸುತ್ತವೆ. ಇದನ್ನು ಖಾಸಗಿ ಕೋಣೆ ಅಥವಾ ಸಾಮಾನ್ಯ ಪ್ರದೇಶದಲ್ಲಿ ನೀಡಬಹುದು. ಡೇ ಕೇರ್ ಸೆಂಟರ್ಗಳು ರೋಗಿಗಳಿಗೆ ಮತ್ತು ಅವರ ಕುಟುಂಬಗಳಿಗೆ ಕ್ಯಾನ್ಸರ್ನ ಸವಾಲುಗಳನ್ನು ನಿಭಾಯಿಸಲು ಸಹಾಯ ಮಾಡುತ್ತವೆ. ಜೊತೆಗೆ 36 ಜೀವರಕ್ಷಕ ಔಷಧಿಗಳಿಗೆ ಅಬಕಾರಿ ಸುಂಕ ವಿನಾಯಿತಿ ನೀಡಲಾಗಿದ್ದು ಕ್ಯಾನ್ಸರ್ ಔಷಧಿಗಳ ದರ ಇಳಿಕೆಯ ಜೊತೆ ಮೆಡಿಕಲ್ ಉಪಕರಣಗಳ ದರ ಇಳಿಕೆ ಮಾಡಲಾಗಿದೆ.