ದೇಶ ಎಂದರೆ ಮಣ್ಣು ಅಲ್ಲ, ದೇಶ ಎಂದರೆ ಜನರು. ಖ್ಯಾತ ಕವಿಯ ಹೇಳಿಕೆಯಂತೆ ನಾವು ಕೆಲಸ ಮಾಡುತ್ತಿದ್ದೇವೆ. ಈ ಬಜೆಟ್‌ನಲ್ಲಿ ಬಡತನ, ಮಹಿಳೆ, ಕೃಷಿ, ಯುವ, ರಫ್ತು ಪ್ರೊತ್ಸಾಹ, ಹೂಡಿಕೆ, ಸಣ್ಣ ಮತ್ತು ಅತಿ ಸಣ್ಣ ವಲಯಗಳನ್ನು ಕೇಂದ್ರೀಕರಿಸಿದೆ. ಧನ ಧಾನ್ಯ ಯೋಜನೆ ನೂರು ಜಿಲ್ಲೆಗಳನ್ನು ಕೇಂದ್ರೀಕರಿಸಿ ಧನ ಧಾನ್ಯ ಯೋಜನೆಯನ್ನು ಜಾರಿಗೊಳಿಸಲಾಗಿದೆ ಇಲ್ಲಿ ಕೃಷಿ ಉತ್ಪನ್ನಗಳ ಬೆಳವಣಿಗೆ ಆದ್ಯತೆ. ನೀರಾವರಿ, ಹಾಗೂ ಸ್ಟೋರೆಜ್ ಗಳ ನಿರ್ಮಾಣ. ಇದರಿಂದ 1.7 ಕೋಟಿ ರೈತರಿಗೆ ಅನುಕೂಲ ಬಿಹಾರದಲ್ಲಿ ಮಖಾನಾ ಬೋರ್ಡ್ ಸ್ಥಾಪನೆ ಅಧಿಕ ಇಳುವಳಿ ಬೀಜಗಳ ಉತ್ಪಾದನೆ ಮತ್ತು ಸಂಶೋಧನೆ. ಎನ್‌ಸಿಸಿಎಫ್ ಕಡೆಯಿಂದ ಧಾನ್ಯಗಳ ಸಂಗ್ರಹಣೆ. ಹಣ್ಣು ಮತ್ತು ತರಕಾರಿಯನ್ನು ಬೆಳೆಗೆ ಪ್ರೊತ್ಸಾಹ ನೀಡಲಾಗುವುದು. ರಾಜ್ಯಗಳ ಜೊತೆಗೆ ಸಹಯೋಗದೊಂದಿಗೆ ಕೆಲಸ ಮಾಡಲಾಗುತ್ತದೆ.
