ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನತೆ ಮುಂದುವರೆದಿದ್ದು, ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಹೌದು, ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರ ಭದ್ರತೆಯನ್ನು ಗೃಹ ಸಚಿವಾಲಯ ಹೆಚ್ಚಿಸಲಾಗಿದೆ. ಈಗಾಗಲೇ ಇರುವ ಝಡ್ ಭದ್ರತೆ ಜತೆಗೆ ಬುಲೆಟ್ ಪ್ರೂಫ್ ಕಾರು ಕೂಡ ಸರ್ಕಾರ ಒದಗಿಸಲಿದೆ. ದೆಹಲಿಯಲ್ಲಿರುವ ಅವರ ನಿವಾಸದಲ್ಲಿ ಭದ್ರತಾ ವ್ಯವಸ್ಥೆಗಳನ್ನು ಹೆಚ್ಚಿಸಲಾಗಿದೆ. ಎಸ್ ಜೈಶಂಕರ್ ಅವರಿಗೆ ಈಗಾಗಲೇ ಗೃಹ ಸಚಿವಾಲಯವು Z- ವರ್ಗದ ಭದ್ರತೆಯನ್ನು ಹೊಂದಿದ್ದು, ಇದನ್ನು ಇದನ್ನು ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಕಮಾಂಡೋಗಳು ಒದಗಿಸುತ್ತಿದ್ದು, ರಕ್ಷಣೆಗಾಗಿ 33 ಕಮಾಂಡೋಗಳ ತಂಡವನ್ನು 24/7 ನಿಯೋಜಿಸಲಾಗಿದೆ. ಪಹಲ್ಲಾಮ್ ಭಯೋತ್ಪಾದಕ ದಾಳಿ ಮತ್ತು ಆಪರೇಷನ್ ಸಿಂದೂರ್ ನಂತರ ಗಡಿಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚಿದ ಮಿಲಿಟರಿ ಉದ್ವಿಗ್ನತೆಯ ನಡುವೆ ಭದ್ರತೆ ಬಿಗಿ ಗೊಳಿಸಲಾಗಿದೆ. ಇದನ್ನೂ ಓದಿ: ‘ಆಪರೇಷನ್ ಸಿಂದೂರ್’ ನಂತರದ ಮುಂದಿನ ಕ್ರಮದ ಕುರಿತು ಇಂದು ಮಹತ್ವದ ಸಭೆ ಹೇಗಿರಲಿದೆ ವಿದೇಶಾಂಗ ಸಚಿವರ ನೂತನ ಭದ್ರತಾ ವ್ಯವಸ್ಥೆ? Z- ವರ್ಗದ ಭದ್ರತೆಯು ಭಾರತದಲ್ಲಿ ಮೂರನೇ ಅತ್ಯುನ್ನತ ಭದ್ರತೆಯಾಗಿದೆ. ಅದರಲ್ಲಿ 22 ಸೈನಿಕರಿರುತ್ತಾರೆ. ಇವರಲ್ಲಿ 4 ರಿಂದ 6 ಎನ್ಎಸ್ಜಿ ಕಮಾಂಡೋಗಳು ಮತ್ತು ಸ್ಥಳೀಯ ಪೊಲೀಸರು ಸೇರಿದ್ದಾರೆ. ಇದು ಬುಲೆಟ್ ಪ್ರೂಫ್ ಕಾರನ್ನು ಸಹ ಹೊಂದಿದೆ. ಹೆಚ್ಚುವರಿಯಾಗಿ, ಬೆಂಗಾವಲು ಪಡೆಗಳನ್ನು ಸಹ ಒದಗಿಸಲಾಗುತ್ತದೆ. ಈ ಭದ್ರತೆಯನ್ನು ಹೆಚ್ಚಿನ ಭದ್ರತೆಯ ಅಗತ್ಯವಿರುವ ದೊಡ್ಡ ನಾಯಕರು ಮತ್ತು ಸೆಲೆಬ್ರಿಟಿಗಳಿಗೆ ನೀಡಲಾಗುತ್ತದೆ. ವಿದೇಶಾಂಗ ಸಚಿವರಿಗೆ ಇರುವ ಬೆದರಿಕೆಯನ್ನು ಗುಪ್ತಚರ ಬ್ಯೂರೋ (ಐಬಿ) ನಿರ್ಣಯಿಸಿದ ನಂತರ ಅಕ್ಟೋಬರ್ 2023ರಲ್ಲಿ ಅವರ ಭದ್ರತೆಯನ್ನು Y- ವರ್ಗದಿಂದ Z- ವರ್ಗಕ್ಕೆ ಹೆಚ್ಚಿಸಲಾಗಿತ್ತು.