ನವದೆಹಲಿ: ಪ್ರವಾಸಿಗರ ನೆಚ್ಚಿನ ತಾಣ ಎನಿಸಿರುವ ಸ್ವಿಜರ್ಲ್ಯಾಂಡಿನಲ್ಲಿ 2025ರ ಜನವರಿ 1ರಿಂದಲೇ ಬುರ್ಖಾ ನಿಷೇಧ ಕಾನೂನು ಜಾರಿಯಾಗಿದೆ. ಯಾರಾದ್ರೂ ಬುರ್ಖಾ ನಿಷೇಧ ಕಾನೂನು ಉಲ್ಲಂಘಿಸಿದರೆ ಒಂದು ಸಾವಿರ ಸ್ವಿಸ್ ಫ್ರಾಂಕ್ (1444 ಡಾಲರ್) ದಂಡ ಕಟ್ಟಬೇಕಾಗುತ್ತದೆ.
2021ರಲ್ಲಿ ಬುರ್ಖಾ ಮತ್ತು ನಿಕಾಬ್ ಬಗ್ಗೆ ಬಹಿರಂಗವಾಗಿ ಬೇಕೋ, ಬೇಡವೋ ಎನ್ನುವ ಬಗ್ಗೆ ಜನರ ಮಧ್ಯೆ ವೋಟಿಂಗ್ ನಡೆದಿತ್ತು. ಸ್ವಿಸ್ ಜನರು 51 ಶೇಕಡಾ ಮಂದಿ ಬುರ್ಖಾ ನಿಷೇಧ ಪರವಾಗಿ ಮತ ಚಲಾಯಿಸಿದ್ದಾರೆ. ಅದರಂತೆ, 2025ರ ಜನವರಿ 1ರಿಂದಲೇ ಸ್ವಿಜರ್ಲ್ಯಾಂಡ್ ನಲ್ಲಿ ಮುಸ್ಲಿಂ ಮಹಿಳೆಯರು ಧರಿಸುವ ಬುರ್ಖಾಗೆ ನಿಷೇಧ ಹೇರಲಾಗಿದೆ