ಬೆಳಗಾವಿ : ಬೆಳಗಾವಿ ಡಿಪೋ – 1 ರ ಮೆಕ್ಯಾನಿಕ್ ಓರ್ವರು KSRTC ಬಸ್‌ನಲ್ಲಿಯೇ ನೇಣು ಬೀಗಿದುಕೊಂಡು ಸಾವಿಗೆ ಶರಣಾದ ದುರ್ಘಟನೆ ನಡೆದಿದೆ.
ಸಾವಿಗೆ ಶರಣಾದ ಬಸ್ ಮೆಕ್ಯಾನಿಕ್ ಕೇಶವ ಕಮಡೊಳಿ (57) ಎಂದು ತಿಳಿದು ಬಂದಿದೆ. ಮೃತ ಕೇಶವ ಕಮಡೊಳಿ ಬೆಳಗಾವಿಯ ಹಳೇ ಗಾಂಧಿನಗರದ ನಿವಾಸಿಯಾಗಿದ್ದು, ಕೆಎಸ್ಆರ್ಟಿಸಿ ಬಸ್ ವಾಶಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು.
ಬೆನ್ನು ನೋವು ಇದ್ದ ಕಾರಣ ಡ್ಯೂಟಿ ಬದಲಿಸದಂತೆ ಅಧಿಕಾರಿಗಳಿಗೆ ಕೇಶವ ಅವರು ಮನವಿ ಮಾಡಿದ್ದರು. ಅಷ್ಟಾಗಿಯೂ ಕೂಡ ಡ್ಯೂಟಿ ಬದಲಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಬೆನ್ನು ನೋವು ಇದ್ದ ಹಿನ್ನೆಲೆಯಲ್ಲಿ ಡ್ಯೂಟಿ ಬದಲಿಸಿದ್ದಕ್ಕೆ ಮತ್ತು ಕೆಲಸದ ಒತ್ತಡ ತಡೆದುಕೊಳ್ಳಲು ಆಗದೆ ಕೇಶವ ಶುಕ್ರವಾರ ತಡರಾತ್ರಿ (ಮಾ.07) ಸಾವಿಗೆ ಶರಣಾಗಿದ್ದಾರೆಂದು ಹೇಳಲಾಗುತ್ತಿದೆ. ಮೆಕ್ಯಾನಿಕ್ ಆತ್ಮಹತ್ಯೆ ಮಾಡಿಕೊಂಡ ಪರಿಣಾಮ ಅಧಿಕಾರಿಗಳ ವಿರುದ್ಧ ಮೃತ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.