ಒಟ್ಟಾವಾ: ಕೆನಡಾ ಪ್ರಧಾನಿ ಮತ್ತು ಲಿಬರಲ್ ಪಕ್ಷದ ನಾಯಕ ಸ್ಥಾನಕ್ಕೆ ಜಸ್ಟಿನ್ ಟ್ರುಡೊ ರಾಜೀನಾಮೆ ಘೋಷಿಸಿದ್ದಾರೆ.
ರೈಡೋ ಕಾಟೇಜ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೆನಡಾದ ನಾಯಕ ರಾಜೀನಾಮೆ ಘೋಷಿಸಿದರು. ಲಿಬರಲ್ ಪಕ್ಷದ ಬಹುತೇಕ ಸಂಸದರು ಅವರ ರಾಜೀನಾಮೆಗೆ ಒತ್ತಾಯಿಸಿದಾಗ ಈ ಘೋಷಣೆ ಹೊರಬಿದ್ದಿದೆ. 153 ಸಂಸದರಲ್ಲಿ 131 ಮಂದಿ ಜಸ್ಟಿನ್ ಟ್ರುಡೊ ವಿರುದ್ಧವಿದ್ದರು. ಹೊಸ ನಾಯಕತ್ವವನ್ನು ಆಯ್ಕೆ ಮಾಡುವವರೆಗೆ ಅಥವಾ ಪಕ್ಷವು ತನ್ನ ಹೊಸ ನಾಯಕನ ಹೆಸರನ್ನು ಅಂಗೀಕರಿಸುವವರೆಗೆ ಟ್ರೂಡೊ ಹಂಗಾಮಿ ಪ್ರಧಾನ ಮಂತ್ರಿಯಾಗಿ ಉಳಿಯುವ ಸಾಧ್ಯತೆಯಿದೆ