ಬಿಗ್ಬಾಸ್ ಸೀಸನ್ ಹನ್ನೊಂದರ ಸ್ಪರ್ಧಿ ಚೈತ್ರಾ ಕುಂದಾಪುರ ಅವರು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡಿಂಗ್ ನಲ್ಲಿದ್ದಾರೆ. ಮೊನ್ನೆ ತಾನೇ ತನ್ನ ಪ್ರೀತಿಸಿದ ಪ್ರಿಯತಮ ಶ್ರೀಕಾಂತ್ ಕಶ್ಯಪ್ ಜೊತೆ ಸಪ್ತಪದಿ ತುಳಿದಿದ್ದಾರೆ. ಇದೀಗ ಅವರು ಮದ್ವೆಯ ಬಳಿಕ ತಮ್ಮ ಹೆಸರನ್ನು ಬದಲಾವಣೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ.
ಇವರ ಮದುವೆಯ ಶಾಸ್ತ್ರದಲ್ಲಿ ಹೆಸರು ಬದಲಾವಣೆ ಮಾಡುವ ಕ್ರಮವಿದೆ. ಶ್ರೀಕಾಂತ್ ಅವರ ತಾಯಿ ಇವರಿಗೆ ಶ್ರೀಮೇಧಾ ಎಂಬ ಹೆಸರಿನಲ್ಲಿ ನಾಮಕರಣ ಮಾಡಿದ್ದಾರೆ. ವರನ ತಾಯಿ ಮದುಮಗಳಿಗೆ ಬಾಳೆಹಣ್ಣು ತಿನ್ನಿಸಿ ಹೆಸರು ಚೇಂಜ್ ಮಾಡುವ ಶಾಸ್ತ್ರವಿದು.
ಇವರ ಗಂಡ ಈಗಾಗಾಲೇ ಆ್ಯನಿಮೇಷನ್ ಕೋರ್ಸಗ ಮುಗಿಸಿ ಪೌರೋಹಿತ್ಯ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಚೈತ್ರಾ ಅವರ ಮದುವೆಯ ಬಳಿಕ ಅವರ ತಂದೆ ನೀಡಿರುವ ಹೇಳಿಕೆಗಳು ಇದೀಗ ಮಾಧ್ಯಮದಲ್ಲಿ ಸಖತ್ ವೈರಲ್ ಆಗ್ತಾ ಇದೆ.