‘ಗೋಲ್‍ಪೋಸ್ಟ್ ಬದಲಿಸುವ ಉದ್ದೇಶದಿಂದ ಜಾತಿಗಣತಿಯ ಚರ್ಚೆ-ಛಲವಾದಿ ನಾರಾಯಣಸ್ವಾಮಿ ಆರೋಪ

WhatsApp
Telegram
Facebook
Twitter
LinkedIn

ಬೆಂಗಳೂರು : ಭ್ರಷ್ಟಾಚಾರದ ಅನೇಕ ಹಗರಣಗಳು, ಮುಖ್ಯಮಂತ್ರಿ ಬದಲಾವಣೆ ವಿಚಾರ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಷಯ- ಹೀಗೆ ಹಲವು ರೀತಿಯ ಸಮಸ್ಯೆಗಳನ್ನು ಕಾಂಗ್ರೆಸ್ ಸರಕಾರ ಎದುರಿಸುತ್ತಿದೆ. ಗೋಲ್‍ಪೋಸ್ಟ್ ಬದಲಿಸುವ ಉದ್ದೇಶದಿಂದ ಜಾತಿಗಣತಿಯ ಚರ್ಚೆಯನ್ನು ಮುಂದಕ್ಕೆ ತಂದಿದ್ದಾರೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆರೋಪಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈಗಾಗಲೇ ಅವರ ಪಕ್ಷದಲ್ಲೇ ಅದಕ್ಕೆ ವಿರೋಧ ಇದೆ. ಒಂದು ಕಡೆ ಡಿ.ಕೆ.ಶಿವಕುಮಾರ್, ಇನ್ನೊಂದು ಕಡೆ ಶಾಮನೂರು ಶಿವಶಂಕರಪ್ಪ ಅವರೂ ವಿರೋಧ ಮಾಡುತ್ತಿದ್ದಾರೆ ಎಂದು ವಿವರಿಸಿದರು.

ಕಾಂತರಾಜ್ ವರದಿಯಲ್ಲಿ ಏನಿದೆಯೋ ಅದನ್ನೇ ಜಯಪ್ರಕಾಶ್ ಹೆಗ್ಡೆಯವರೂ ಕೊಟ್ಟಿದ್ದಾರೆ. ಅಂದಮೇಲೆ ಕಳೆದ ಹಲವು ವರ್ಷಗಳಲ್ಲಿ ಏನು ಬದಲಾವಣೆ ಆಗಿದೆ? ವಾಸ್ತವವಾಗಿ ಪರಿಶಿಷ್ಟ ಜಾತಿಗಳ ಜನಸಂಖ್ಯೆ ಈಗ ಸುಮಾರು 1.50 ಕೋಟಿ ಇದ್ದರೂ ಅದನ್ನು ಒಂದು ಕೋಟಿ ಎಂಟು ಲಕ್ಷ ಎಂದೇ ತೋರಿಸಿದ್ದಾರೆ ಎಂದು ಟೀಕಿಸಿದರು.

ಸರಿಯಾದ ಅಂಕಿಅಂಶ ಇಲ್ಲ; ಮುಂದಿನ ಏಪ್ರಿಲ್, ಮೇ ತಿಂಗಳಿನಲ್ಲಿ ಜನಗಣತಿ ನಡೆಯಲಿದೆ. ಆಗ ಸರಿಯಾದ ಅಂಕಿಅಂಶ ಸಿಗಲಿದೆ ಎಂದ ಅವರು, ಇವರು ಮಾಡಿರುವುದು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಗಣತಿಯೇ ಹೊರತು ಜಾತಿ ಗಣತಿ ಅಲ್ಲ ಎಂದು ವಿಶ್ಲೇಷಿಸಿದರು. ಇದಕ್ಕೆ ನಮ್ಮ ವಿರೋಧ ಇಲ್ಲ; ಎಲ್ಲವನ್ನೂ ಗಣನೆಗೆ ತೆಗೆದುಕೊಂಡು, ತಾರತಮ್ಯ ಮಾಡದೆ ಇದ್ದರೆ ಇದನ್ನು ಒಪ್ಪಬಹುದು ಎಂದು ಹೇಳಿದರು.

ಪ್ರಶ್ನೆಗೆ ಉತ್ತರಿಸಿದ ಅವರು, ಅನುಷ್ಠಾನ ಮಾಡುವುದಾದರೆ ಸಾಧಕ ಬಾಧಕಗಳನ್ನು ಅರ್ಥ ಮಾಡಿಕೊಂಡು ಜನರಿಗೆ ಉಪಯುಕ್ತ ಆಗಿದ್ದರೆ, ಚರ್ಚೆ ಮಾಡಬೇಕಿದೆ. ಆದರೆ, ಸೋರಿಕೆ ಮಾಡಿ ಚರ್ಚೆ ಮಾಡುತ್ತಿದ್ದಾರೆ. ಗುತ್ತಿಗೆದಾರರು ಸರಕಾರದ ವಿರುದ್ಧ ಶೇ 60 ಕಮಿಷನ್ ಸಂಬಂಧ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದಾರೆ. ಪತ್ರವನ್ನೂ ಬರೆಯುತ್ತಿದ್ದಾರೆ. ಇವುಗಳಿಗೆ ಸರಕಾರದ ಬಳಿ ಉತ್ತರವಿಲ್ಲ; ಆದ್ದರಿಂದ ಗೋಲ್‍ಪೋಸ್ಟ್ ಬದಲಿಸಲು ಇಂಥವುಗಳನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

 

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon