ಚೆನ್ನೈ : ಯುಪಿಎಸ್ ಸಿ ಪರೀಕ್ಷಾ ಸಾಧಕರಲ್ಲಿ ಇಂದು ನಾವು ಪರಿಚಯ ಮಾಡಿಕೊಡುತ್ತಿರುವುದು ಬಿ ಚಂದ್ರಕಲಾಅವರ ಕುರಿತು. ಅವರ ಸಾಧನೆಯ ಕಥೆ ಇಲ್ಲಿದೆ.
ಯುಪಿ ಕೇಡರ್ ನ 2008ರ ಬ್ಯಾಚ್ ನ ಐಎಸ್ ಅಧಿಕಾರಿ ಬಿ ಚಂದ್ರಕಲಾ ಮೂಲತಃ ತೆಲಂಗಾಣದವರು. ಅವರು ಹೈದರಾಬಾದ್ ನ ಕೋಟಿ ಮಹಿಳಾ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. ಅಲ್ಲಿದ್ದಾಗಲೇ ಅರ್ಥಶಾಸ್ತ್ರದಲ್ಲಿ ಎಂಎ ಮಾಡಿದ್ದಾರೆ.
ಪರೀಕ್ಷಾ ತಯಾರಿಯ ಸಮಯದಲ್ಲಿ ಚಂದ್ರಕಲಾ ಅವರಿಗೆ ಕುಟುಂಬದ ಸಂಪೂರ್ಣ ಬೆಂಬಲ ಸಿಕ್ಕಿತು. ಅದರಲ್ಲೂ ಪತಿ ಆಕೆಗೆ ಸಾಕಷ್ಟು ಬೆಂಬಲ ನೀಡಿದ್ದರು. ವಾಸ್ತವವಾಗಿ ಚಂದ್ರಕಲಾ ತನ್ನ ಪದವಿಯ ಸಮಯದಲ್ಲಿ ಮದುವೆಯಾದರು. ಇದರ ನಂತರ ಅವರು ತಮ್ಮ ಅಧ್ಯಯನವನ್ನು ಮುಂದುವರೆಸಿದರು.
ಚಂದ್ರಕಲಾ ಅವರ ಕಠಿಣ ಪರಿಶ್ರಮಕ್ಕೆ ಫಲ ಸಿಕ್ಕಿತು. ಅವರು 2008 ರಲ್ಲಿ 409 ನೇ ರ್ಯಾಂಕ್ ಪಡೆಯುವ ಮೂಲಕ UPSC ನಲ್ಲಿ ಯಶಸ್ಸನ್ನು ಸಾಧಿಸಿದರು. ಆರಂಭದಲ್ಲಿ ಅವರನ್ನು ಪ್ರಯಾಗ್ ರಾಜ್ ನಲ್ಲಿ ಸಿಡಿಒ ಆಗಿ ನೇಮಿಸಲಾಯಿತು.
ಇದಾದ ನಂತರ ಅವರು ಹಮೀರ್ ಪುರದ ಡಿಎಂ ಆದರು. ಇದಲ್ಲದೆ, ಅವರು ಬುಲಂದ್ ಶಹರ್, ಬಿಜ್ನೋರ್ ಮತ್ತು ಮೀರತ್ ನ ಜಿಲ್ಲಾಧಿಕಾರಿ ಕೂಡ ಆಗಿದ್ದಾರೆ.
2019ರಲ್ಲಿ ಅಕ್ರಮ ಗಣಿಗಾರಿಕೆ ಹಗರಣದಲ್ಲಿ ಅವರ ಹೆಸರು ಕೇಳಿ ಬಂದಿತ್ತು. ಆ ವೇಳೆ ಅವರ ಮನೆ ಮೇಲೂ ಸಿಬಿಐ ದಾಳಿ ನಡೆಸಿತ್ತು. ಚಂದ್ರಕಲಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸಕ್ರಿಯರಾಗಿದ್ದರು.