ಬೆಂಗಳೂರು: ಶಾಸಕ ದೌಡ್ಡನಗೌಡ ಅವರ ಆಪ್ತ ಸಹಾಯಕ ಚಂದ್ರು ವಡಗೇರಿ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ನಡೆದಿದೆ.
ಚಂದ್ರು ವಡಗೇರಿ(46) ಮೃತರು. ಕಳೆದ 20 ವರ್ಷಗಳಿಂದ ಶಾಸಕ ದೌಡ್ಡನಗೌಡ ಅವರ ಆಪ್ತ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಇದೀಗ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಶಾಸಕರು ಬೇಸರ ವ್ಯಕ್ತಪಡಿಸಿದ್ದಾರೆ.
ಚಂದ್ರು ವಡಗೇರಿ ಅವರಿಗೆ ಕೆಲದಿನಗಳ ಹಿಂದೆ ಸಣ್ಣ ಕರುಳಿನ ಆಪರೇಷನ್ ಆಗುತ್ತು. ಚಿಕಿತ್ಸೆ ಬಳಿಕ ಗುಣಮುಖರಾಗಿದ್ದ ಅವರಿಗೆ ಏಕಾಏಕಿ ಹೃದಯಾಘಾತವಾಗಿದೆ. ತಕ್ಷಣ ಕುಷ್ಟಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.