ಸೋಷಿಯಲ್ ಮೀಡಿಯಾದಲ್ಲಿ ಕಂಟೈಂಟ್ ಕ್ರಿಯೇಟ್‌ರ್‌ಗಳು ಹಣ ಸಂಪಾದನೆ ಮಾಡ್ತಾರೆ ಅಂತ ಎಲ್ಲರಿಗೂ ಗೊತ್ತಿದೆ. ಈ ಪೈಕಿ ಕೆಲ ನಟಿಯರು ತಮ್ಮದೇ ವಿಧಾನದಲ್ಲಿ ಸಂಪಾದನೆ ಮಾಡುತ್ತಿದ್ದಾರೆ. ಈ ಪೈಕಿ ಸ್ಟಾರ್ ನಟಿಯೊಬ್ಬರು ತಮ್ಮ ಪ್ರೀಮಿಯಂ ಸೇವೆಗಳ ದರ ಘೋಷಿಸುವ ಮೂಲಕ ಶಾಕ್ ನೀಡಿದ್ದಾರೆ.
ಹೌದು.. ‘ನೈಟ್ ಟಾಕ್ ಬೈ ರಿಯಲ್ ಹಿಟ್’ ಎಂಬ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ನಟಿ ಅಂಕಿತಾ ಸಿಂಗ್ ಶಾಕಿಂಗ್ ವಿಚಾರ ಬಿಚ್ಚಿಟ್ಟಿದ್ದಾರೆ. ಅಂಕಿತಾ ವಾರಣಾಸಿ ಮೂಲದ ಕಂಟೆಂಟ್ ಕ್ರಿಯೇಟರ್ ಮತ್ತು ನಟಿ. ಆಗಾಗ ತಮ್ಮ ಲುಕ್ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡ್ ಕ್ರಿಯೆಟ್ ಮಾಡುತ್ತಾರೆ.
ಅಂಕಿತಾ ಹೆಚ್ಚಾಗಿ ಫಿಟ್‌ನೆಸ್ ವೀಡಿಯೊಗಳು ಮತ್ತು ಫೋಟೋಗಳ ಮೂಲಕ ಗಮನಸೆಳೆಯುತ್ತಿದ್ದಾರೆ. 1.8 ಮಿಲಿಯನ್ ಇನ್ಸ್ಟಾ ಫಾಲೋವರ್ಸ್ ಹೊಂದಿರುವ ಅಂಕಿತಾ, ತಮ್ಮ ಇನ್ನೊಂದು ಫಿಟ್‌ನೆಸ್ ಖಾತೆಯಲ್ಲಿ 78 ಸಾವಿರ (78K) ಫಾಲೋವರ್ಸ್ ಹೊಂದಿದ್ದಾರೆ. ಅವರ ಕೆಲವು ರೀಲ್‌ಗಳು 100 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿವೆ. ಅಂಕಿತಾ ಸಿಂಗ್ ಯಾವುದೇ ಸಿನಿಮಾಗಳಲ್ಲಿ ನಟಿಸಿಲ್ಲ, ಆದರೆ ಅವರು ಕೋಯಿ ಸೆಹ್ರಿ ಬಾಬು 2.0, ಗಾಡಿಯಂತಹ ಹಲವಾರು ಸಂಗೀತ ವೀಡಿಯೊಗಳಲ್ಲಿ ನಟಿಸಿದ್ದಾರೆ.
ಇತ್ತೀಚಿಗೆ ಈ ಸುಂದರಿ, ಸಂದರ್ಶನವೊಂದರಲ್ಲಿ ಕುತೂಹಲಕಾರಿ ವಿಷಯ ಬಿಚ್ಚಿಟ್ಟರು. ತಮ್ಮ ಜೊತೆ 5-10 ನಿಮಿಷಗಳ ಕಾಲ ಅಪ್ಲಿಕೇಶನ್‌ನಲ್ಲಿ ಚಾಟ್ ಮಾಡಲು ಬಯಸಿದರೆ, 15,000 ರಿಂದ 20,000 ರೂ. ಪಾವತಿಸಬೇಕು. ಅದೇ ರೀತಿ, ವೀಡಿಯೊ ಕರೆಗೆ, 30,000 ಕ್ಕಿಂತ ಹೆಚ್ಚು ನೀಡಬೇಕು. 3 ಲಕ್ಷ ರೂ. ಪಾವತಿಸಿದರೆ ಅವರ ಫೋನ್ ಸಂಖ್ಯೆಯೂ ಸಿಗುತ್ತದೆ ಎಂದು ಹೇಳಿಕೊಂಡಿದ್ದಾರೆ.
ಅಂಕಿತಾ ಸಿಂಗ್ ಈ ರೀತಿಯ ಪ್ರೀಮಿಯಂ ಸೇವೆಗಳನ್ನು ನೀಡುವ ಮೂಲಕ, ವಿಭಿನ್ನ ವ್ಯವಹಾರ ಮಾದರಿಯನ್ನು ಅನುಸರಿಸುತ್ತಿದ್ದಾರೆ. ಈ ವಿಧಾನದಿಂದ ಜೀವನ ರೂಪಿಸಿಕೊಳ್ಳುತ್ತಿದ್ದಾರೆ. ಪ್ರಸ್ತುತ ಈ ಚೆಲುವೆಯ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ..