ಬೆಂಗಳೂರು: ವಿಚ್ಚೇದಿತ ಮಹಿಳೆಗೆ ಬಾಳು ಕೊಡುತ್ತೇನೆ, ನಿನ್ನೊಂದಿಗೆ ನನ್ನ ಸುಂದರ ಜೀವನ ಎಂದೆಲ್ಲಾ ಮರುಳು ಮಾಡಿ ಮದುವೆಯಾದ ಅಸಾಮಿ, ಬಳಿಕ ಒಂದೇ ವರ್ಷದಲ್ಲಿ ಮಗು ಕೈಗೆ ನೀಡಿ ಆಕೆಯ ಬಳಿ ಇದ್ದ ನಗದು, ಚಿನ್ನಾಭರಣ ಸೇರಿ ಬರೋಬ್ಬರಿ 36 ಲಕ್ಷ ರೂಪಾಯಿ ಪಡೆದು ಎಸ್ಕೇಪ್ ಆಗಿರುವ ಘಟನೆ ಬೆಂಗಳೂರಿನ ಬನಶಂಕರಿಯಲ್ಲಿ ನಡೆದಿದೆ.
ಡಿವೋರ್ಸ್ ಮಹಿಳೆಗೆ ಬಾಳು ಕೊಡೋದಾಗಿ ಮದುವೆ, ಬಳಿಕ ಕೈಗೊಂದು ಮಗುವನ್ನು ಕೊಟ್ಟು ಆಕೆಯಿಂದ 36 ಲಕ್ಷ ರೂಪಾಯಿ ಪಡೆದು ಎಸ್ಕೇಪ್ ಆಗಿದ್ದಾನೆ. ಇದೀಗ ಮತ್ತೊಂದು ಮದುವೆಗೆ ಸಜ್ಜಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
































