ಚಿತ್ರದುರ್ಗ : ಸಿದ್ದರಾಮಯ್ಯನವರು ಅವರು ನಂಬರ್-01 ಮುಖ್ಯಮಂತ್ರಿ.ಅದಕ್ಕೆ ಅವರನ್ನ ಎರಡನೇ ಅಂಬೇಡ್ಕರ್ ಎಂದು ಕರೆಯುತ್ತೇವೆ ಎಂದು ಮಾಜಿ ಸಚಿವರಾದ ಹೆಚ್. ಆಂಜನೇಯ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒಳ ಮೀಸಲಾತಿಗೆ ಸಂಬಂಧಪಟ್ಟಂತೆ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ವರದಿ ಬಗ್ಗೆ ಕೆಲವರು ಅಪಸ್ವರ ಎತ್ತುತ್ತಿದ್ದಾರೆ.ಇದು ಪ್ರಜಾಪ್ರಭುತ್ವ ರಾಷ್ಟ್ರ. ಇದು ಸಾಮಾನ್ಯ.ಈ ವರದಿಯಿಂದ ಸತ್ಯದ ಅನಾವರಣ ಆಗಿದೆ.ನಾಗಮೋಹನ್ದಾಸ್ರವರು ಯೋಗ್ಯವಾದ ವರದಿಯನ್ನು ತಯಾರಿಸಿ ನೀಡಿದ್ದಾರೆ. ಆಗಸ್ಟ್-16ರಂದು ಕರೆದಿರುವ ವಿಶೇಷ ಸಚಿವ ಸಂಪುಟದಲ್ಲಿ ತೀರ್ಮಾನ ತೆಗೆದುಕೊಂಡು ಜಾರಿ ಮಾಡಿ ಎಂದು ಸರ್ಕಾರವನ್ನು ಮಾಜಿ ಸಚಿವರಾದ ಹೆಚ್. ಆಂಜನೇಯ ಒತ್ತಾಯಿಸಿದ್ದಾರೆ
ಒಳ ಮೀಸಲಾತಿ ಜಾರಿಗೆ ದಿನಗಣನೆ ಆರಂಭವಾಗಿದೆ.. ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ರವರ ನೇತೃತ್ವದ ಆಯೋಗ ಮೇ-05 ರಿಂದ ಜುಲೈ-06 ರವರಿಗೆ ಮನೆ ಮನೆಗೆ ತೆರಳಿ ಪರಿಶಿಷ್ಟರ ಜಾತಿಗಣತಿ ಹಾಗೂ ವೈಜ್ಞಾನಿಕವಾಗಿ ಸಂವಿಧಾನಿಕವಾಗಿ ಸಮೀಕ್ಷೆ ನಡೆಸಿದ್ದಾರೆ.ಈ ವರದಿಯನ್ನು ಸರ್ಕಾರ ಆಗಸ್ಟ್-04 ರಂದು ಸ್ವೀಕಾರ ಮಾಡಿ ಆಗಸ್ಟ್ -07ರಂದು ಸಂಪುಟದಲ್ಲಿ ಮಂಡಿಸಿ ವರದಿಯ ಪ್ರತಿಗಳನ್ನು ಎಲ್ಲಾ ಮಂತ್ರಿಗಳಿಗೆ ನೀಡಿದ್ದಾರೆ ಹಾಗೂ ಔಪಚಾರಿಕ ಚರ್ಚೆಯು ಸಹ ನಡೆದಿದೆ. ಆಯೋಗ ನೀಡಿದ ವರದಿಯು 1700 ಪುಟಗಳಿದ್ದು ವರದಿಯ ಎಲ್ಲಾ ಅಂಶಗಳನ್ನು ಅಧ್ಯಯನ ಮಾಡಿ ಎಂದು ಎಲ್ಲಾ ಸಚಿವರಿಗೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ ಎಂದರು.
ಆಯೋಗದ ವರದಿಯ ಕೆಲವು ಮುಖ್ಯಾಂಶಗಳನ್ನು ಸಂಪುಟದಲ್ಲಿ ಓದಿದ್ದು ಯಾರು ಸಹ ತಕರಾರು ಎತ್ತಿಲ್ಲ.. ಆದರೆ ಇದರ ಬಗ್ಗೆ ಕೆಲವು ಊಹಾಪೋಹಗಳನ್ನು ಹರಡುತ್ತಿದ್ದಾರೆ. ನಮ್ಮ ಪಕ್ಷ ಕಳೆದ ಚುನಾವಣೆಯ ಸಂದರ್ಭದಲ್ಲಿ ಚಿತ್ರದುರ್ಗ ನಗರದಲ್ಲಿ ನಡೆದ ಸಮಾವೇಶದಲ್ಲಿ ಒಳ ಮೀಸಲಾತಿ ಜಾರಿ ಮಾಡಲಾಗುವುದು ಎಂದು ಘೋಷಣೆ ಮಾಡಲಾಗಿತ್ತು.ಚುನಾವಣೆ ಪ್ರಣಾಳಿಕೆ ಸಂದರ್ಭದಲ್ಲಿ ನಾವು ಒಳ ಮೀಸಲಾತಿ ಜಾರಿ ಮಾಡಲು ಶಿಫಾರಸ್ಸು ಮಾಡುತ್ತೇವೆ ಎಂದು ಹೇಳಿದ್ದೆವು ಆದರೆ ಜಾರಿ ಮಾಡುವ ಅಧಿಕಾರ ಇರಲಿಲ್ಲ.. ಆ ಅಧಿಕಾರ ಬಂದಿದ್ದು 2024 ಆಗಸ್ಟ್ -01 ರಂದು ಸುಪ್ರೀಂ ಕೋರ್ಟ್ ನೀಡಿದ ಆದೇಶ ನೀಡಿದ ನಂತರ.ಸುಪ್ರೀಂ ಕೋರ್ಟ್ ಆದೇಶ ನಂತರ ಮಾಡುತ್ತೇವೆ ಒಳ ಮೀಸಲಾತಿ ಜಾರಿ ಮಾಡುತ್ತೇವೆ ಎಂದು ಮುಖ್ಯಮಂತ್ರಿಗಳು ಹೇಳಿದ್ದರು ಅದಕ್ಕೆ ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ.. ಇದು ಕಾಂಗ್ರೆಸ್ ಸರ್ಕಾರದ 6ನೇ ಗ್ಯಾರಂಟಿ. ನುಡಿದಂತೆ ನಡೆದ ಸರ್ಕಾರ ನಮ್ಮ ಕಾಂಗ್ರೇಸ್ ಸರ್ಕಾರ ಎಂದು ಅಂಜನೇಯ ತಿಳಿಸಿದರು.
ಆಯೋಗದ ವರದಿ ಜಾರಿಯ ಬಗ್ಗೆ ಉಪ ಸಮಿತಿಯ ನೇಮಕ ಎಂದು ಉಹಾಪೋಹಗಳು ಹರಡುತ್ತೇವೆ.. ಇದಕ್ಕೆ ಯಾವುದೇ ಉಪಸಮಿತಿ ಅವಶ್ಯಕತೆ ಇಲ್ಲ.ಒಳ ಮೀಸಲಾತಿ ಜಾರಿ ಮಾಡುವವರೆಗೂ ಯಾವುದೇ ನೇಮಕಾತಿಯನ್ನು ಸರ್ಕಾರ ಮಾಡುತ್ತಿಲ್ಲ ಮಾದಿಗರು ಮಾತನಾಡಿದ ಸುಮ್ಮನಿದ್ದರೆ ಸಾಕು ಅದಷ್ಟಕ್ಕೆ ತಾನೇ ಜಾರಿಯಾಗುತ್ತದೆ.ಅದನ್ನ ಸರ್ಕಾರ ಮಾಡುತ್ತದೆ. ಆಗಸ್ಟ್ 16ರಂದು ನಡೆಯುವ ವಿಶೇಷ ಅಧಿವೇಶನದಲ್ಲಿ ಒಳ ಮೀಸಲಾತಿಯನ್ನು ಜಾರಿ ಮಾದಿಗರಿಗೆ ಸ್ವತಂತ್ರ ನೀಡಬೇಕು.ರಾಷ್ಟ್ರದ ಜನಸಂಖ್ಯೆಯ ಶೇ 34% ರಷ್ಟು ಇರುವ ಮಾದಿಗ ಸಮುದಾಯಕ್ಕೆ ಶೇ. 0.96% ರಷ್ಟು ಜನ ಮಾತ್ರ ಉದ್ಯೋಗದಲ್ಲಿದ್ದಾರೆ ಸಮೀಕ್ಷೆಯಲ್ಲಿ ಆದಿ ಕರ್ನಾಟಕ/ಆದಿ ಆಂಧ್ರ ರವರಲ್ಲಿನ ಗೊಂದಲದಿಂದ ಸಮೀಕ್ಷೆ ತಡವಾಯಿತು.. ಜನಸಂಖ್ಯೆಯಲ್ಲಿ ಮಾದಿಗ ಸಮುದಾಯ ಹೆಚ್ಚಿದೆ.!