ಚಿತ್ರದುರ್ಗ: ಭಾರತೀಯ ಪುರಾತತ್ವ ಇಲಾಖೆ ಚಿತ್ರದುರ್ಗ, ಕೋಟೆ ವಾಯುವಿಹಾರ ಸಂಘ ಚಿತ್ರದುರ್ಗ, ಜಿಲ್ಲಾ ಪರಿಸರ ಪ್ರೇಮಿಗಳ ಒಕ್ಕೂಟ ಚಿತ್ರದುರ್ಗ, ಭಾರತೀಯ ಯೋಗ ಶಿಕ್ಷಣ ಸಂಸ್ಥೆ (ರಿ.) ಚಿತ್ರದುರ್ಗ, ನೆಹರು ಯುವ ಕೇಂದ್ರ ಚಿತ್ರದುರ್ಗ, ಎಸ್ .ಜೆ ಎಂ ಫಾರ್ಮಸಿ ಕಾಲೇಜ್ ಎನ್ಎಸ್ಎಸ್ ಘಟಕ ಚಿತ್ರದುರ್ಗ ಇವರುಗಳ ಸಂಯುಕ್ತಾಶ್ರಯದಲ್ಲಿ ಶನಿವಾರ ಬೆಳಗ್ಗೆ 7:00 ಗಂಟೆಯಿಂದ ಚಿತ್ರದುರ್ಗದ ಐತಿಹಾಸಿಕ ಕೋಟೆ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಜಿಲ್ಲಾ ಪರಿಸರ ಪ್ರೇಮಿಗಳ ಒಕ್ಕೂಟದ ಅಧ್ಯಕ್ಷ ಮಲ್ಲಿಕಾರ್ಜುನಯ್ಯ ಮಾತನಾಡಿ ಕೋಟೆ ಆವರಣದಲ್ಲಿ ಬಹುದಿನಗಳಿಂದ ಪ್ಲಾಸ್ಟಿಕ್ ತ್ಯಾಜ್ಯ ಮುಳ್ಳು ಗಿಡಗಂಟಿಗಳು ಬೆಳೆದಿದ್ದು ಇದರಿಂದ ಕೋಟೆಗೆ ಭೇಟಿ ನೀಡುವ ಪ್ರವಾಸಿಗರಲ್ಲಿ ಕೋಟೆಯ ಬಗ್ಗೆ ಕೀಳರಿಮೆ ಉಂಟಾಗುತ್ತಿದ್ದು ಅದಕ್ಕಾಗಿ ಇಂದು ವಿವಿಧ ಸಂಘಟನೆಗಳ ಸಯೋಗದಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಇದರಲ್ಲಿ ಕಾಲೇಜು ವಿದ್ಯಾರ್ಥಿಗಳ ಪಾತ್ರ ಬಹುದೊಡ್ಡದಾಗಿದೆ ವಿದ್ಯಾರ್ಥಿ ವಿಷಯದಿಂದಲೇ ಮಕ್ಕಳಲ್ಲಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶ್ರೀಮತಿ ರಾಣಿ ಕೋಟೆಯ ಸುರಕ್ಷತೆ ಮತ್ತು ಸ್ವಚ್ಛತೆಗಾಗಿ ಭಾರತೀಯ ಪುರಾತತ್ವ ಇಲಾಖೆ ಕಾರ್ಮಿಕರು ಸಾಕಷ್ಟು ಶ್ರಮವಹಿಸುತ್ತಿದ್ದು ಆದರೂ ಕೆಲವೊಂದು ಸಮಯದಲ್ಲಿ ಪ್ರವಾಸದ ಸಂಖ್ಯೆ ಹೆಚ್ಚಾದಾಗ ಪ್ಲಾಸ್ಟಿಕ್ ಬಾಟಲಿಗಳು ಪ್ಲಾಸ್ಟಿಕ್ ಚೀಲಗಳು ಎಲ್ಲೆಂದರಲ್ಲಿ ಬಿಟ್ಟು ಹೋದರಿಂದ ಸ್ವಚ್ಛತೆಯ ಸಮಸ್ಯೆ ಉಂಟಾಗುತ್ತದೆ ಕೋಟೆ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಯಾವುದೇ ಸಂಘಟನೆ ಜೊತೆಗೆ ಎಂದಿಗೂ ಸಹಕಾರ ನೀಡುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕೋಟೆ ವಾಯು ವಿಹಾರಿಗಳ ಸಂಘದ ಅಧ್ಯಕ್ಷ ಆರ್ ಸತ್ಯಣ್ಣ ಮಾತನಾಡಿ ಕೋಟಿ ಪ್ರವಾಸಿಗರು ತಿಂಡಿ ತಿಂದು ಬಿಸಾಡಿದ ಪ್ಲಾಸ್ಟಿಕ್ ಪೊಟ್ಟಣಗಳಲ್ಲಿನ ಆಹಾರ ಸೇವಿಸುವ ಕೋಟೆಯಲ್ಲಿ ಆಶ್ರಯ ಪಡೆದಿರುವ ನೂರಾರು ಕೋತಿಗಳು ನವಿಲುಗಳು ಗಿಳಿಗಳು ಪ್ರಾಣ ಕಳೆದುಕೊಳ್ಳುತ್ತಿವೆ ಸಾಧ್ಯವಾದಷ್ಟು ಸಾರ್ವಜನಿಕರು ಪ್ರವಾಸಿಗರು ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಕೋಟೆಯ ಆವರಣದೊಳಗೆ ತರದೆ ಇರುವುದು ಒಳ್ಳೆಯದು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಪರಿಸರ ಪ್ರೇಮಿಗಳಾದ ಕ್ಯೂಬಾನಾಯಕ್, ನಾಗರಾಜ್, ಮಲ್ಲಿಕಾರ್ಜುನಚಾರ್ , ಚಿತ್ರದುರ್ಗ ಭಾರತೀಯ ಪುರಾತತ್ವ ಇಲಾಖೆ ಅಧಿಕಾರಿ ಇಫ್ರಾನ್, ಭಾರತೀಯ ಯೋಗ ಶಿಕ್ಷಾ ಸಂಸ್ಥೆಯ ಅಧ್ಯಕ್ಷ ರವಿ ಕೆ. ಅಂಬೇಡ್ಕರ್, ಯೋಗ ಶಿಕ್ಷಕಿಯರಾದ ಶ್ರೀಮತಿ ಮಂಜುಳಾ ವಸಂತಲಕ್ಷ್ಮಿ ಕವಯಿತ್ರಿ ಶೋಭಾ ಮಲ್ಲಿಕಾರ್ಜುನ್ ಹಾಗೂ ಎಸ್ ಜೆ ಎಂ ಫಾರ್ಮಸಿ ಕಾಲೇಜಿನ ಎನ್ಎಸ್ಎಸ್ ಘಟಕದ ವಿದ್ಯಾರ್ಥಿಗಳು ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು