ಚಿತ್ರದುರ್ಗ: ಚಿತ್ರದುರ್ಗ ನಗರಕ್ಕೆ ಕುಡಿಯುವ ನೀರು ಸರಬರಾಜು ಆಗುವ ಶಾಂತಿಸಾಗರ ಮುಖ್ಯ ಕೊಳವೆ ಮಾರ್ಗದ ಸೋಮಲಾಪುರ ಗ್ರಾಮ, ಕೊಟ್ಟಿಗೆಹಳ್ಳಿ ಪಂಪ್ ಹೌಸ್ ಮತ್ತು ಬಿ.ದುರ್ಗ ಹತ್ತಿರ ಲಿಕೇಜ್ ಉಂಟಾಗಿದೆ.
ಆದ್ದರಿಂದ ಸದರಿ ಕೊಳವೆ ಮಾರ್ಗದ ದುರಸ್ಥಿ ಕಾರ್ಯದ ಹಿನ್ನಲೆಯಲ್ಲಿ ಡಿ.25 ರಿಂದ 28 ರವರೆಗೆ 3 ದಿನಗಳ ಕಾಲ ನಗರದ ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸದರಿ ದಿನಗಳಂದು ಸಾರ್ವಜನಿಕರು ಕೊಳವೆ ಬಾವಿಗಳು ಮತ್ತು ಶುದ್ಧ ಕುಡಿಯುವ ನೀರಿನ ಘಟಕದ ನೀರನ್ನು ಉಪಯೋಗಿಸುವಂತೆ ನಗರಸಭೆ ಪ್ರಕಟಣೆ ತಿಳಿಸಿದೆ.

































