ಚಿತ್ರದುರ್ಗ : ಇನ್ನರ್ವೀಲ್ಹ್ ಕ್ಲಬ್ ಚಿತ್ರದುರ್ಗ ಅಧ್ಯಕ್ಷರಾಗಿ ವೀಣ ಜಯರಾಂ, ಕಾರ್ಯದರ್ಶಿಯಾಗಿ ಶೋಭ ರಾಮಚಂದ್ರ ಇವರುಗಳ ಪದಗ್ರಹಣ ದವಳಗಿರಿ ಬಡಾವಣೆಯಲ್ಲಿರುವ ಗಾಯತ್ರಿ ಶಿವರಾಂ ಇನ್ನರ್ವೀಲ್ಹ್ ಭವನದಲ್ಲಿ ಭಾನುವಾರ ನಡೆಯಿತು.
ಪದಗ್ರಹಣ ಸ್ವೀಕರಿಸಿ ಮಾತನಾಡಿದ ಇನ್ನರ್ವೀಲ್ಹ್ ಕ್ಲಬ್ ಚಿತ್ರದುರ್ಗ ಅಧ್ಯಕ್ಷೆ ವೀಣ ಜಯರಾಂ ನಾಲ್ಕು ವರ್ಷಗಳ ಕಾಲ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದ ಫಲವಾಗಿ ಇನ್ನರ್ವೀಲ್ಹ್ ಕ್ಲಬ್ ಅಧ್ಯಕ್ಷ ಸ್ಥಾನ ಸಿಕ್ಕಿದೆ. ನನ್ನ ಅಧಿಕಾರವಧಿಯಲ್ಲಿ ಹಿರಿಯ ನಾಗರೀಕರು ಹಾಗೂ ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಒತ್ತು ಕೊಡಲಾಗುವುದು. ಸರ್ಕಾರಿ ಶಾಲೆಗಳ ಬಲವರ್ಧನೆ ಜೊತೆಗೆ ಉಚಿತ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ, ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಇಪ್ಪತ್ತಕ್ಕೂ ಹೆಚ್ಚು ಮಹಿಳೆಯರಿಗೆ ಉಚಿತವಾಗಿ ಟೈಲರಿಂಗ್ ತರಬೇತಿ ನೀಡಿದ್ದೇನೆ. ಇದರಿಂದ ಸ್ವಾವಲಂಭಿಗಳಾಗಿ ಬದುಕಲು ಸಹಕಾರಿಯಾಗಿದೆ ಇನ್ನರ್ವೀಲ್ಹ್ ಕ್ಲಬ್ 102 ವರ್ಷಗಳನ್ನು ಪೂರೈಸುತ್ತಿರುವುದು ಅತ್ಯಂತ ಸಂತೋಷದ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವೀಣ ಸ್ವಾಮಿ ಪದಗ್ರಹಣ ನೆರವೇರಿಸಿದರು.
ಜ್ಯೋತಿ ಲಕ್ಷ್ಮಣ್ ಬುಲೆಟಿನ್ ಬಿಡುಗಡೆಗೊಳಿಸಿದರು.
ಭಾಗ್ಯಲಕ್ಷ್ಮಿ, ವನಜಾ ಅನಂತರಾಜ್, ಪೂಜಾ ಪ್ರದೀಪ್ ಇವರುಗಳು ವೇದಿಕೆಯಲ್ಲಿದ್ದರು.
ರೂಪ ಜನಾರ್ಧನ್, ಪಾಸ್ಟ್ ಪ್ರೆಸಿಡೆಂಟ್ ಮೋಕ್ಷರುದ್ರಸ್ವಾಮಿ, ಗಾಯತ್ರಿ ಶಿವರಾಂ, ಮಾಧುರಿ ಮಧುಪ್ರಸಾದ್, ಶ್ಯಾಮಲ ಶಿವಪ್ರಕಾಶ್ ಇನ್ನು ಅನೇಕರು ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿದ್ದರು.