ಚಿತ್ರದುರ್ಗ: ಚಿತ್ರದುರ್ಗ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಆಯ್ದ ದಿನಗಳಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಚಿತ್ರದುರ್ಗ ವಿಭಾಗ ವ್ಯಾಪ್ತಿಯಲ್ಲಿರುವ 220/66/11 ಕೆ.ವಿ ಚಿತ್ರದುರ್ಗದಿಂದ ಬರುವ 220 ಕೆ.ವಿ ಹಿರೆಮಲ್ಲನಹೊಳೆ-ಚಿತ್ರದುರ್ಗ ಮಾರ್ಗ ಮತ್ತು 66 ಕೆ.ವಿ ತುರುವನೂರು-ಚಿತ್ರದುರ್ಗ ಮಾರ್ಗದಲ್ಲಿ ವಿ.ಜೆ.ಎನ್.ಎಲ್ ಅವರು ಭದ್ರಾ ಮೇಲ್ದಂಡೆ ಯೋಜನೆಯ ಅಕ್ವಡಕ್ಟ್ ನಿರ್ಮಾಣ ಕಾಮಗಾರಿ ನಿರ್ವಹಿಸುವುದರಿಂದ ಈ ವಿ.ವಿ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ 220 ಕೆ.ವಿ ಹಿರೆಮಲ್ಲನಹೊಳೆ-ಚಿತ್ರದುರ್ಗ ಮಾರ್ಗ ಮತ್ತು 66 ಕೆ.ವಿ ತುರುವನೂರು-ಚಿತ್ರದುರ್ಗ ಮಾರ್ಗಗಳ ಮಾರ್ಗ ಮುಕ್ತತೆ ನೀಡಬೇಕಾಗಿರುವುದರಿಂದ ಇದೇ ಫೆ.5, 8, 16, 22, 26 ಹಾಗೂ ಮಾರ್ಚ್ 1 ಮತ್ತು 5ರಂದು ಅಂದು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ವಿದ್ಯುತ್ ವ್ಯತ್ಯಾಯವಾಗಲಿದೆ.
ವಿದ್ಯುತ್ ಅಡಚಣೆ ಯಾಗುವ ಪ್ರದೇಶಗಳು : ಮಾಡನಾಯಕನಹಳ್ಳಿ, ಸಿ.ಜಿ.ಹಳ್ಳಿ, ಯಳವರ್ತಿ, ಮುದ್ದಾಪುರ, ಹೊಸಗೊಲ್ಲರಹಟ್ಟಿ, ಬಂಗಾರಕ್ಕನಹಳ್ಳಿ, ರಾಯನಹಳ್ಳಿ, ಸೂರೇನಹಳ್ಳಿ, ಐನಹಳ್ಳಿ, ತುರುವನೂರು, ಬೋಮ್ಮಕ್ಕನಹಳ್ಳಿ, ಕೂನಬೇವು, ಅವಳೇನಹಳ್ಳಿ, ದೊಡ್ಡಘಟ್ಟ, ಕರಿಯಮ್ಮನಹಟ್ಟಿ, ಕೋಟೆಹಟ್ಟಿ, ಹುಣಸೇಕಟ್ಟೆ , ಯಳಗೋಡು, ಇಸಾಮುದ್ರ, ನೆಲ್ಲಿಕಟ್ಟೆ , ಕಾಲಗೆರೆ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಗ್ರಾಹಕರು ಸಹಕರಿಸಬೇಕು ಎಂದು ಚಿತ್ರದುರ್ಗ ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.






























