ನೀಟ್–2024 ಪ್ರಶ್ನೆಪತ್ರಿಕೆ ಸೋರಿಕೆ ಆಗಿಲ್ಲ ಸ್ಪಷ್ಟನೆ.!

 

 

ನವದೆಹಲಿ: ಭಾನುವಾರ ನಡೆದ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯ ನೀಟ್–2024 ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಯಾಗಿದೆ ಎಂದು ವದಂತಿಗಳು ಹರಿದಾಡಿದವು.  

Advertisement

ಈ ವಿಷಯವಾಗಿ ಪ್ರತಿಕ್ರಿಯಿಸಿರುವ ಎನ್ಟಿಎ, ಜಾಲತಾಣಗಳಲ್ಲಿ ಹರಿದಾಡಿರುವ ಪ್ರಶ್ನೆಪತ್ರಿಕೆಗೂ ನೀಟ್ 2024ರ ಪ್ರಶ್ನೆಪತ್ರಿಕೆಗೂ ಯಾವುದೇ ಸಂಬಂಧವಿಲ್ಲ. ಯಾವುದೇ ರೀತಿಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿಲ್ಲ. ಪರೀಕ್ಷೆ ಸುಗಮವಾಗಿ ನಡೆದಿದೆ. ಆರೋಪಗಳಿಗೆ ಯಾವುದೇ ದಾಖಲೆಗಳಿಲ್ಲ. ಆಧಾರರಹಿತ ಆರೋಪಗಳನ್ನು ಮಾಡಬಾರದು ಎಂದು ತಿಳಿಸಿದೆ.

ಪರೀಕ್ಷಾ ಕೇಂದ್ರದೊಳಗೆ ಪ್ರವೇಶಿಸಲೂ ಯಾರಿಗೂ ಅವಕಾಶ ಇಲ್ಲ. ಸಿಸಿಟಿವಿ ಕಣ್ಗಾವಲಿನಲ್ಲಿ ಅತ್ಯಂತ ಪಾರದರ್ಶಕವಾಗಿ ಪರೀಕ್ಷೆ ನಡೆದಿದೆ ಎಂದು ಎನ್ಟಿಎ ಹಿರಿಯ ನಿರ್ದೇಶಕಿ ಸಾಧನಾ ಪರಿಚಾರ್ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ದೇಶದ 571 ನಗರಗಳ ಹಾಗೂ ಹೊರದೇಶದ 14 ನಗರಗಳ ಒಟ್ಟು 4,750 ಪರೀಕ್ಷಾ ಕೇಂದ್ರಗಳಲ್ಲಿ ನೀಟ್ ಪರೀಕ್ಷೆ ನಡೆದಿದೆ.

ದೇಶದ ಸರ್ಕಾರಿ, ಖಾಸಗಿ ಹಾಗೂ ಹೊರದೇಶದ ಕೆಲವು ಕಾಲೇಜುಗಳಲ್ಲಿ ವೈದ್ಯಕೀಯ ಪದವಿ ಕೋರ್ಸ್ಗಾಗಿ ನ್ಯಾಷನಲ್ ಟೆಸ್ಟಿಂಗ್ ಏಜನ್ಸಿ ನೀಟ್ ಪರೀಕ್ಷೆ ನಡೆಸುತ್ತದೆ. ನ್ಯಾಷನಲ್ ಟೆಸ್ಟಿಂಗ್ ಏಜನ್ಸಿ (NTA) ಸ್ಪಷ್ಟಪಡಿಸಿದೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement