ದಾವಣಗೆರೆ: ಇತ್ತೀಚೆಗೆ ನಾವು ಒಗ್ಗಟ್ಟಿನಲ್ಲಿದ್ದರೆ ಸರ್ಕಾರ ಬೀಳಿಸಬಹುದು ಎಂದು ಹೇಳಿಕೆ ನೀಡಿದ್ದ ಕಾಂಗ್ರೆಸ್ MLA ಶಾಮನೂರು ಶಿವಶಂಕರಪ್ಪ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
ಕಾಂಗ್ರೆಸ್ ಸರ್ಕಾರ ವಿಸರ್ಜನೆಯಾಗುತ್ತದೆ ಎಂಬ ಭ್ರಮೆಯಲ್ಲಿ ಇರಬೇಡಿ ಎಂದು BJP ನಾಯಕರಿಗೆ ತಿರುಗೇಟು ನೀಡಿದ್ದಾರೆ. ಆದರೆ, ಇದೇ ವೇಳೆ ವೀರಶೈವ ಲಿಂಗಾಯತ ಸಮಾವೇಶಕ್ಕೆ CMಗೆ ಆಹ್ವಾನಿಸುವೀರಾ? ಎಂದು ಪ್ರಶ್ನಿಸಿದಾಗ, ಸಮಾವೇಶಕ್ಕೆ CM ಕರೆಯೋಲ್ಲ ಎಂದು ಹೇಳುವ ಮೂಲಕ ಅವರ ಮೇಲಿರುವ ಅಸಮಾಧಾನ ಮತ್ತೆ ಮುಂದುವರೆಸಿದ್ದಾರೆ.